ಪಾಲ್ಘರ್ : ಲಘು ಭೂಕಂಪ
ಪಾಲ್ಘರ್, ನವೆಂಬರ್ 09: ಜಮ್ಮು ಕಾಶ‍್ಮೀರದ ಪಾಲ್ಗಘರ್
ಜಿಲ್ಲೆಯಲ್ಲಿ ಸೋಮವಾರ ಲಘು ಭೂಕಂಪ ಸಂಭವಿಸಿದೆ ಎಂದು ವಿಕೋಪ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.
‘ಸೋಮವಾರ ಮುಂಜಾನೆ 05 .31ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ’ ಎಂದು ವಿಕೋಪ ನಿಯಂತ್ರಣದ ಅಧಿಕಾರಿ ವಿವೇಕಾನಂದ್ ಕದಮ್ ಮಾಹಿತಿ ನೀಡಿದ್ದಾರೆ.
ಆದರೆ, ಘಟನೆಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಜಿಲ್ಲೆಯು ನವೆಂಬರ್ 2018 ರಿಂದ ವಿವಿಧ ತೀವ್ರತೆಯ ಭೂ ಕಂಪನ ಎದುರಿಸುತ್ತಿದೆ ಮತ್ತು ಆರಂಭಿಕ ಅವಧಿಯಲ್ಲಿ ಹಲವು ಕಂಪನಗಳಾಗಿವೆ. ದಹನು ತಾಲ್ಲೂಕಿನ ದುಂಡಲ್ವಾಡಿ ಗ್ರಾಮದಲ್ಲಿ ಕಂಪನದ ಕೇಂದ್ರಬಿಂದು ಗೋಚರಿಸಿದೆ. ಅಂದಿನಿಂದ ನೂರಾರು ಬಾರಿ ಭೂಮಿ ಕಂಪಿಸಿದ್ದು, ತಿಂಗಳ ಹಿಂದೆ ನಿಂತಿದ್ದ ಕಂಪನ ಮತ್ತೆ ಸೋಮವಾರ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.