ರಾಣೆಬೆನ್ನೂರ

ಸೂರ್ಯ ನಮಸ್ಕಾರದಿಂದ ಸಮೃದ್ಧಿ ಜೀವನ: ಪ್ರಕಾಶಾನಂದಜಿ

ಸೂರ್ಯ ನಮಸ್ಕಾರದಿಂದ ಸಮೃದ್ಧಿ ಜೀವನ: ಪ್ರಕಾಶಾನಂದಜಿ

ಲೋಕದರ್ಶನ ವರದಿ 

ರಾಣೇಬೆನ್ನೂರು 10: ಭಗವಂತನ ಸೃಷ್ಠಿ ಯಾರಿಗೂ ತಿಳಿಯುವುದಿಲ್ಲ. ಪ್ರಕೃತಿ ಮಾತೆ ಆಯಾ ಋತುಮಾನಕ್ಕೆ ತಕ್ಕಂತೆ ತನ್ನಿಂದ ತಾನೇ ಬದಲಾವಣೆಯಾಗಲಿದೆ. ಹಾಗೆಯೇ ವರ್ಷದಲ್ಲಿ ಒಂದು ಬಾರಿ ಸೂರ್ಯ ನಾರಾಯಣ ಸ್ವಾಮಿಯು ರಥವನ್ನೇರಿ ಪ್ರಖರ ಬೆಳಕನ್ನು ನೀಡುವುದು ಭೂಮಿ ಇರುವವರೆಗೆ ಸಾಗುತ್ತಲೇ ಇರುತ್ತದೆ. ಮಾನವನ ವಿಕಾಸತೆಯ ಪರ್ವ ಇದಾಗಿದ್ದು ಶ್ರೀ ಸ್ವಾಮಿಗೆ 108 ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಹಾಗೂ ಸಮೃದ್ಧಿ ಜೀವನವನ್ನು ಸಂಪಾದಿಸಿದಂತಾಗುತ್ತದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜಿ ಮಹಾರಾಜ್ ನುಡಿದರು. 

ಅವರು ಸೋಮವಾರ ಮುಂಜಾನೆ ಶ್ರೀ ಆದಿಶಕ್ತಿ ಧ್ಯಾನ ಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್‌ ಮತ್ತು ಜಿಲ್ಲಾ ಆರೋಗ್ಯ ಭಾರತಿ ಸಹಯೋಗದಲ್ಲಿ ನಡೆದ ರಥ ಸಪ್ತಮಿ  108 ಸೂರ್ಯ ನಮಸ್ಕಾರ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ ಯೋಗ-ಧ್ಯಾನ ಮತ್ತು ಪ್ರಾಣಾಯಾಮದಿಂದ ನಿತ್ಯದ ಬದುಕಿನಲ್ಲಿ ಸದಾ ಕ್ರೀಯಾಶೀಲರಾಗಿ ಆರೋಗ್ಯಯುತ ಬದುಕನ್ನು ಸಾಗಿಸಿದ್ದಾರೆ. ಇದಕ್ಕೆಲ್ಲ ಪ್ರೇರಣೆ ನಮ್ಮ ಋಷಿ ಮುನಿಗಳು ಮೂಲ ಕಾರಣರಾಗಿದ್ದಾರೆ. ಪಾಶ್ಚಿಮಾತ್ಯ ಜೀವನ ಇಂದು ಬಹುತೇಕವಾಗಿ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಲಿದೆ ಎಂದ ಶ್ರೀಗಳು ಪ್ರತಿಯೊಬ್ಬರೂ ಸೂರ್ಯ ಉದಯಕ್ಕೂ ಮುನ್ನ ಹೊರಬಂದು ಪ್ರಾಥಮಿಕ ಗುರು ಸೂರ್ಯನಿಗೆ ನಮಸ್ಕಾರ ಸಮರ​‍್ಿಸುವುದರಿಂದ ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಜೀವನವನ್ನು ಸಾಗಿಸಬಹುದಾಗಿದೆ ಎಂದರು. ಹಲಗೇರಿ ಠಾಣಾ ಪಿಎಸ್‌ಐ ಮತ್ತು ಯೋಗ ಸಾಧಕರಾದ ಕೆ.ಸಿ.ಕೋಮಲಾಚಾರ್ ಅವರು ಯೋಗ ಅದರ ಮಹತ್ವ ಮತ್ತು ಆರೋಗ್ಯ ಬದುಕಿಗೆ ಸಾಧನೆ ಅನುಸರಣೆ ಹೇಗೆ ಎನ್ನುವ ಕುರಿತಂತೆ ಯೋಗ ಪ್ರಾತ್ಯಕ್ಷಿತೆಯ ಮೂಲಕ ಪ್ರದರ್ಶನ ನೀಡಿದರು.  

ಜಿಲ್ಲಾಧ್ಯಕ್ಷ ರವೀಂದ್ರ ವಿಜಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 2ತಾಸು ನಡೆದ ರಥ ಸಪ್ತಮಿಯಲ್ಲಿ ನೂರಾರು ಯೋಗ ಸಾಧಕರು, ಯೋಗ ಪಟುಗಳು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಬಿಎಸ್‌ಟಿ ಅಧ್ಯಕ್ಷ ಆರ್‌.ಎನ್‌. ರಾಠೋಡ , ಆರೋಗ್ಯ ಭಾರತಿ ಅಧ್ಯಕ್ಷ ಡಾಽಽ ಶಿವಪ್ರಕಾಶ ತಂಡಿ, ಪ್ರಾಂತೀಯ ಮಹಿಳಾ ವರಿಷ್ಠ ಪ್ರಭಾರಿ ವಜ್ರೇಶ್ವರಿ ಲದ್ವಾ, ಜಿಲ್ಲಾ ಪ್ರಭಾರಿ ಜ್ಯೋತಿ ಜಂಬಗಿ, ಯೋಗೇಂದ್ರ ಹೊಳೆಬಾಗಿಲ, ರೇಖಾ ರಾಮಾಳದ, ಶಂಭು, ಶಶಿಕಲಾ ಬಡೇಂಕಲ್, ನಿರುಪಮಾ, ಕವಿತಾ ಕುಬಸದ, ಹೇಮಾ ತಾಳೂರ, ಚಂದ್ರ​‍್ಪ ಲಮಾಣಿ, ಕವಿತಾ ಬಾನುವಳ್ಳಿ, ಜಗದೀಶ ಸುಣಗಾರ, ಶಿವಾನಂದ ಬಡೆಂಕಲ್, ಎಂ.ಬಿ.ಮೋಟಳ್ಳಿ, ಸುವರ್ಣಮ್ಮ ಬಾನುವಳ್ಳಿ, ಪ್ರಕಾಶ ಮಾಗೋಡ, ಲಲಿತಾ ಮೇಲಗಿರಿ, ಸರೋಜಾ ಸುಣಗಾರ ಸೇರಿದಂತೆ ನೂರಾರು ಯೋಗ ಸಾಧಕರು ಉಪಸ್ಥಿತರಿದ್ದರು. 


ಸುದ್ದಿ ಓದಿ