ಗ್ರಂಥಪಾಲಕ ಮನಮಿ ಬಸವ ವಿಭೂಷಣ ಪ್ರಶಸ್ತಿಗೆ ಆಯ್ಕೆ
ಇಂಡಿ : ತಾಲೂಕಿನ ಮಸಳಿ ಬಿ.ಕೆ ಗ್ರಾಮದ ಗ್ರಂಥಪಾಲಕ ಪಿ.ಜೆ. ಮನಮಿ ಅವರು ಬಸವ ಜನ್ಮ ಭೂಮಿ ಪ್ರತಿಷ್ಠಾನ ಬಸವನ ಬಾಗೇವಾಡಿಯ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಬಸವ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪಿ.ಜೆ. ಮನಮಿ ಅವರು ಸರಕಾರಿ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾರಣ ಅವರನ್ನು ಪ್ರತಿಷ್ಠಾನ ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ.ಮಾ.14ರಂದು ವಿಜಯಪುರದ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್ ಬೆಂಗಳೂರು ಸಭಾಂಗಣದಲ್ಲಿ ಪ್ರತಿಷ್ಠಾನದ ದಶಮಾನೋತ್ಸವ ಹಾಗೂ ವಚನ ವೈಭವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕ ಡಾ. ಮುರುಗೇಶ ಸಂಗಮ್ ತಿಳಿಸಿದ್ದಾರೆ.