ಮಹಿಳಾ ಸಂಘಗಳು ಆರ್ಥಿಕವಾಗಿ ಸಬಲೀಕರಣ ಹೊಂದಲಿ: ಶಾಸಕ ಅಮರೇಗೌಡ ಬಯ್ಯಾಪೂರ
ಕುಷ್ಟಗಿ 16: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಣ ಹೊಂದುವು ಹಿತದೃಷ್ಟಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸರಕಾರ ಬೀಜ ಧನವನ್ನು ವಿತರಿಸಿದೆ ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೃತ ಮಹೋತ್ಸವ ಯೋಜನೆ ಅಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮತ್ತು ಶಿಶು ಅಭಿವೃದ್ಧಿ ಯೋಜನೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಿಗ್ಗೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಏರಿ್ಡಸಿದ್ದ ತಾಲೂಕಿನ 37 ಗ್ರಾಮ ಪಂಚಾಯಿತಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ 1ಲಕ್ಷ ರೂಪಾಯಿ ಮೌಲ್ಯದ ಬೀಜ ಧನದ ಚೆಕ್ ವಿತರಿಸಿ ಮಾತನಾಡಿದ ಅವರು ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘಗಳು ಕಿರು ಉದ್ಯಮಗಳಲ್ಲಿ ಯಶಸ್ಸು ಕಂಡು ಅಭಿವೃದ್ಧಿ ಹೊಂದಬೇಕು ತಾಲೂಕಿನ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ತಾವು
ಸಿದ್ಧಪಡಿಸಿದ ಸಾಮಗ್ರಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಕುಷ್ಟಗಿ ನಗರದಲ್ಲಿ ಸಂತೆಯನ್ನು ಆರಂಭಿಸಿದ್ದು ಅಲ್ಲಿಯ ವಸ್ತುಗಳನ್ನು ಮಾರಾಟ ಮಾಡಿ ತಮ್ಮ ಜೀವನವನ್ನು ನಿರ್ವಹಿಸಬೇಕು ಎಂದು ಹೇಳಿದರು ಸರ್ಕಾರ ಮಹಿಳೆಯರ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅಂಬರೀಶ್ ಎಂ ಮಾತನಾಡಿ ಕುಷ್ಟಗಿ ತಾಲೂಕಿನಲ್ಲಿ 600 ಸಂಘಗಳು ರಚನೆಯಾಗಿದ್ದು ಇವುಗಳ ಪೈಕಿ ಅತ್ಯಂತ ಚಟುವಟಿಕೆಯಿಂದ ಇರುವ 37 ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಸಂಘಗಳಿಗೆ ತಲಾ ಒಂದು ಲಕ್ಷ ರೂಪಾಯಿ ಬೀಜ ಧನವನ್ನು ವಿತರಿಸಲಾಗಿದೆ. ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಈ ಬೀಜ ಧನದಿಂದ ಅನೇಕ ಕಿರು ಉದ್ಯಮಗಳನ್ನು ಸ್ಥಾಪಿಸಿ ಉನ್ನತ ಮಟ್ಟವನ್ನು ತಲುಪಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್ ಚೌಹಾಣ್ ಮಾತನಾಡಿ ಮಹಿಳಾ ಸ್ವ ಸಹಾಯ ಸಂಘಟನೆಗಳು ಆರ್ಥಿಕವಾಗಿ ಸುಧಾರಿಸಲು 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ ಇದರಿಂದ ಸ್ವಸಹಾಯ ಸಂಘಗಳ ಬಲಪಡಿಸಿ ದಂತಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಎನ್ ಆರ್ ಎಲ್ ಎಮ್ ಕಾರ್ಯಕ್ರಮ ವ್ಯವಸ್ಥಾಪಕ ಸಂಗಣ್ಣ ಸಂಗಾಪೂರ, ಮಾದೇಗೌಡ ಪೊಲೀಸ್ ಪಾಟೀಲ್, ರಾಜು ಭಜಂತ್ರಿ, ವಿಜಯಕುಮಾರ ಚಿತ್ತಲಿ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವಿದ್ಯಾವತಿ ಕುಲಕರ್ಣಿ, ಪೋಷಣ್ ಅಭಿಯಾನ ಸಂಯೋಜಕ ಮಲ್ಲಯ್ಯ ಹಿರೇಮಠ, ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಪ್ರತಿನಿಧಿಗಳಾದ ಮಹೇಶ್ವರ ಪಾಟೀಲ್, ಹನುಮಕ್ಕ ಜರಗಡ್ಡಿ, ಶೇಖವ್ವ ಹಲಕೋಲಿ, ಶೋಭಾ ರಾಠೋಡ, ಜಯಶ್ರೀ ಬಡಿಗೇರಿ ಸೇರಿದಂತೆ 37 ಶ್ರೀ ಶಕ್ತಿ ಸ್ವಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.