ಸೌಂದತ್ತಿ

ಸೈನಿಕರನ್ನು ಗೌರವಿಸುವಂತ ಕಾರ್ಯಗಳು ನಡೆಯಲಿ: ಶಿವಲಿಂಗಶ್ರೀ

ಸೈನಿಕರನ್ನು ಗೌರವಿಸುವಂತ ಕಾರ್ಯಗಳು ನಡೆಯಲಿ: ಶಿವಲಿಂಗಶ್ರೀ

ಸವದತ್ತಿ 21: ಸುದೀರ್ಘ ಅವಧಿಯವರೆಗೆ ದೇಶ ಸೇವೆಯನ್ನು ಮಾಡಿ ಮರಳಿ ತಮ್ಮ ಕುಟುಂಬಕ್ಕೆ ಸೇರುವಂತ ಸೈನಿಕರ ಸಾಧನೆಗೆ ಸಮಾಜದಲ್ಲಿ ನಾವೆಲ್ಲಾ ಕೃತಜ್ಞತಾ ಭಾವನೆಯೊಂದಿಗೆ ಅವರನ್ನು ಗೌರವಿಸುವಂತ ಕಾರ್ಯಗಳು ನಡೆಯಬೇಕೆಂದು ಕಲ್ಮಠದ ಶಿವಲಿಂಗ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣದ ಸಾಂಬಯ್ಯನಮಠದಲ್ಲಿ 26 ವರ್ಷಗಳ ಸುದೀರ್ಘ ಅವಧಿಯವರೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಆಗಮಿಸಿದ ಶಿವಯ್ಯ ಮುರಘಯ್ಯನವರಮಠ ಅವರ ಸನ್ಮಾನ ಸಮಾರಂಭ ಹಾಗೂ ನಿವೃತ್ತ ಯೋಧನ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ದೇಶಕ್ಕಾಗಿ ತಮ್ಮೆಲ್ಲಾ ವಯಕ್ತಿಕ ಬದುಕನ್ನು ತ್ಯಾಗ ಮಾಡಿ ದೇಶದ ಜನರನ್ನು ರಕ್ಷಿಸುವಂತ ಕಾರ್ಯ ಮಾಡುತ್ತಿರುವ ಸೈನಿಕರ ಕಾರ್ಯ ಶ್ಲಾಘನೀಯವಾಗಿದ್ದು, ಸೇವೆಯೆಂಬ ಕಾರ್ಯಕ್ಕೆ ನಿವೃತ್ತಿ ಎಂಬುದಿಲ್ಲವಾಗಿರುವದರಿಂದ ನಿವೃತ್ತ ಯೋಧರ ಸೇವೆ ಇನ್ನು ಮುಂದೆ ಸಮಾಜದ ಒಳಿತಕ್ಕಾಗಿ ಮೀಸಲಾಗಿರಲಿ ಎಂದರು. 

ನಿವೃತ್ತ ಯೋಧ ಶಿವಯ್ಯ ಮುರಘಯ್ಯನಮಠ ಮಾತನಾಡಿ, ಸೇನೆಗೆ ಸೇರಿದ ನಂತರ ಕರ್ತವ್ಯದ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.  

ನಿವೃತ್ತ ಯೋಧ ಶಿವಯ್ಯ ಹಾಗೂ ಅವರ ಪತ್ನಿ ಸವಿತಾರನ್ನು ಶ್ರೀಮಠದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. 

ಶಂಕರಲಿಂಗ ದೇವಸ್ಥಾನದಿಂದ ಸಾಂಬಯ್ಯನಮಠದವರೆಗೆ ಮೆರವಣಿಗೆಯೊಂದಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಗೌರವದೊಂದಿಗೆ ಬರಮಾಡಿಕೊಂಡರು. 

ನಿವೃತ್ತ ಸೈನಿಕ ಹಾಗೂ ಶಿಕ್ಷಕ ಪೂಜಾರ, ರಾಮತೀರ್ಥ ಜೋಶಿ, ತಮ್ಮಣ್ಣ ಸಂಬಯ್ಯನಮಠ, ರಾಜು ದೇಶಪಾಂಡೆ, ಸಂತೋಷ ಸಂಬಯ್ಯನಮಠ, ರಾಜು ಕಾಮಕರ, ಸುರೇಶ ಬಾಳೋಜಿ, ಈರಪ್ಪ, ಚಿಕ್ಕುಂಬಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ