ಅಥಣಿ

ಯುವಕರು ನಾಡು ನುಡಿಗಾಗಿ ಶ್ರಮಿಸಲಿ: ರವಿ ಪೂಜಾರಿ

ಯುವಕರು ನಾಡು ನುಡಿಗಾಗಿ ಶ್ರಮಿಸಲಿ: ರವಿ ಪೂಜಾರಿ

ಅಥಣಿ 25: ಪಟ್ಟಣದ ಲಕ್ಷ್ಮಿ ನಾರಾಯಣ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಳಗ ಶಾಖೆಯನ್ನು ರಾಜ್ಯ  ಕಾರ್ಯದರ್ಶಿ ರವಿ ಪೂಜಾರಿ ಅವರು ಉದ್ಘಾಟಿಸಿದರು.   

ನಂತರ ಮಾತನಾಡಿದ ಅವರು ಕನ್ನಡಕ್ಕಾಗಿ ಸದಾ ಕಾಲ ತಮ್ಮನ್ನು ತಾವು ತೊಡಗಿಸಿಕೊಳ್ಳುವುದೇ ಒಂದು ಪುಣ್ಯದ ಕೆಲಸ. ಇವತ್ತಿನ ಯುವಕರು ನಾಡು ನುಡಿಗಾಗಿ ಶ್ರಮಿಸಲಿ ಎಂದು ಆಶಿಸುತ್ತೇನೆ. ಗಡಿಭಾಗದಲ್ಲಿ ಕನ್ನಡ ಹೀಗೆ ಅರಳುತಿರಲಿ ಕನ್ನಡದ ಕಾಯಕ ಮುಂದುವರೆಯಲಿ ಎಂದು ಹೇಳಿದರು.  

ಅಥಣಿ ತಾಲೂಕ ಅಧ್ಯಕ್ಷ ದೀಪಕ್ ಬುರ್ಲಿ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ನ ಮಹಾಮಳಕ್ಕೆ ಅವಕಾಶ ನೀಡಬಾರದು ಒಂದು ವೇಳೆ ಪರವಾನಗಿ ನೀಡಿದಲ್ಲಿ  ಅಥಣಿ ತಾಲೂಕಿನ ಗಡಿಯನ್ನು  ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಆಗ ಅಧಿಕಾರಗಳು ಬೇಕಾದ್ರೆ ನಮ್ಮ ಮೇಲೆ ಪ್ರಕರಣ ದಾಖಲು ಮಾಡಲಿ ಎಂದು ಎಚ್ಚರಿಸಿದರು.  

ನಾವು ಜೈಲಿಗೆ ಹೋಗಲು ಕೂಡ ಸಿದ್ಧರಿದ್ದೇವೆ. ಮತ್ತು ಗಡಿ ಭಾಗವನ್ನು ರಾಜ್ಯ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಗಡಿ ಭಾಗದ ಅಭಿವೃದ್ಧಿಗೆ ಆರ್ಥಿಕ ಹಣಕಾಸಿನ ನೆರವನ್ನು ಆಯಾ ಇಲಾಖೆಗಳಿಗೆ ನೀಡಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇತ್ತ ಬಂದು ಹೋಗಬೇಕು, ಜಿಲ್ಲಾಧಿಕಾರಿಗಳು ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.  

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ್ಣದ ಪದಾಧಿಕಾರಿಗಳಾದ ಪ್ರಶಾಂತ್ ಪಟ್ಟೇಕರ್, ಆಕಾಶ್ ಚೌಹಾನ್, ಮಾಂತೇಶ್ ಬಿರಾದರ್, ಪ್ರಮೋದ್ ಆಕಾಶ್, ಶಂಕರ್ ದೇಸಾಯಿ, ನಂದೀಶ್ ಮಾಲಗಾವಿ, ಅಮೂಲ್ ಪೂಜಾರಿ, ಅಮರ್ ಭಜಂತ್ರಿ, ಅವಳೆ ಅಮಿತ್, ದೇವಗಾರ್ ದಾಸರಳ್ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ