ಬೈಲಹೊಂಗಲ

ಸ್ವಾಮಿ ವಿವೇಕಾನಂದರ ತತ್ವಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಲಿ: ಗುಡಗನಟ್ಟಿ

ಸ್ವಾಮಿ ವಿವೇಕಾನಂದರ ತತ್ವಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಲಿ: ಗುಡಗನಟ್ಟಿ

ಬೈಲಹೊಂಗಲ 13:  ದೇಶ ಕಂಡ ವೀರ, ಅಪ್ರತಿಮ ಚಿಂತಕ, ಅಧ್ಯಾತ್ಮ ಜೀವಿ ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ರಾಷ್ಟ್ರೀಯತೆಯನ್ನು ದೇಶ ವಿದೇಶಗಳಲ್ಲಿ ಪ್ರಚಲಿತಗೊಳಿಸಿ ಯುವಕರಲ್ಲಿ ದೇಶಸೇವೆಯ ಬಗ್ಗೆ ಸನಾತನ ಧರ್ಮದ ಬಗ್ಗೆ ಸ್ಫೂರ್ತಿಯನ್ನು ತುಂಬಿದ ಸ್ವಾಮಿ ವಿವೇಕಾನಂದರ ಅದರ್ಶ ತತ್ವಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕೆಂದು ಸವದತ್ತಿ ಪಿಎಸೈ ಶಿವಾನಂದ ಗುಡಗನಟ್ಟಿ ಹೇಳಿದರು. 

ಅವರು ಸಮೀಪದ ಮಲ್ಲೂರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ಸಂಘಟನೆ ಮಲ್ಲೂರ ಇವರ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಯುವಕರ ಐಕಾನ ಆಗಿದ್ದು ಅವರ ಜೀವನ, ವಿಚಾರಧಾರೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು. ಊರಿನ ಗ್ರಾಮಸ್ಥರು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ತಿಳಿಸಿದರು. 

ಮುಖ್ಯ ಅತಿಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು ಬಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ಕೃಷಿಯನ್ನು ಲಾಭದಾಯಕವಾಗಿ ಸುವುದು ಹೇಗೆ ಎಂಬುದನ್ನು ತಮ್ಮ ಸ್ವ  ಅನುಭವದ ವಿಚಾರಗಳನ್ನು ತಿಳಿಸಿದರು. ಯುವ ರೈತರೊಂದಿಗೆ ಸಂವಾದ ನಡೆಸಿದರು.  

ಸರಕಾರಿ ಪದವಿ ಪೂರ್ವ ಕಾಲೇಜು ಯಕ್ಕುಂಡಿ ಪ್ರಾಚಾರ್ಯ  ಡಾ. ವೈ ಎಮ್ ಯಾಕೊಳ್ಳಿ ಉಪನ್ಯಾಸ ನೀಡಿ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಕುರಿತು ಮಾರ್ಮಿಕವಾಗಿ ತಿಳಿಸಿದರು. 

ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹೊಸದಾಗಿ ಸರಕಾರಿ ನೌಕರಿಗೆ ಸೇರಿದ ಯುವಕರ ತಂದೆತಾಯಿಗಳನ್ನು ಸನ್ಮಾನಿಸಲಾಯಿತು. 

ಎಸ್ ಆರ್ ಕರಡಿಯವರು ನಿರೂಪಿಸಿದರು.  ವ್ಹಿ ಬಿ ತವಗಮಠ ಸ್ವಾಗತಿಸಿದರು. ನಾಗಪ್ಪ ಪೆಂಟೇದ ವಂದಿಸಿದರು. ಆರ್ ಎಸ್ ಸಣಮನಿ ನಿರೂಪಿಸಿದರು. ಸ್ವಾಮಿ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ