ಅಥಣಿ

ರೈತರು ಅಧ್ಯಯನಕ್ಕೆ ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಬರಲಿ

ರೈತರು ಅಧ್ಯಯನಕ್ಕೆ ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಬರಲಿ

ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕ ರಘುಪತಿ ಭಟ್ 

ಅಥಣಿ 14: ಕೃಷಿ, ನೀರಾವರಿಗಾಗಿ ಇಸ್ರೇಲ್ ಹಾಗೂ ಇತರ ದೇಶಗಳಿಗೆ ಅಧ್ಯಯನಕ್ಕೆ ತೆರಳುವ ಬದಲು ರಾಜ್ಯದ ರೈತರು ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಅಧ್ಯಯನಕ್ಕೆ ಬರಬೇಕು ಎಂದು ವಿಧಾನ ಸಭೆಯ ಭರವಸೆ ಸಮೀತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು. 

ಅವರು ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡುತ್ತಿದ್ದರು. 

ಬರಗಾಲ ಪೀಡಿತ ಪ್ರದೇಶದಲ್ಲಿ ರೈತರ ಸಹಯೋಗದಲ್ಲಿ ಶ್ರೀಮಂತ ಪಾಟೀಲರು ದೇಶಕ್ಕೆ ದೊಡ್ಡ ಕೊಡುಗೆ ಕೊಡುವ ಮೂಲಕ ಆಹಾರ ಭದ್ರತೆ ಹೆಚ್ಚಿಸಿದ್ದಾರೆ ಎಂದ ಅವರು ಎಲ್ಲರೂ ಸರಕಾರದ ಮೇಲೆ ಅವಲಂಬಿತರಾಗದೇ ಇಂತಹ ಯೋಜನೆಗಳಿಗೆ ಕೈ ಜೋಡಿಸಬೇಕು ಎಂದರು. 

ಶ್ರೀಮಂತ ಪಾಟೀಲರ ಈ ಯೋಜನೆಗಳ ಕುರಿತು ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆಯಾಗಬೇಕು ಜೊತೆಗೆ ಎಲ್ಲ ಶಾಸಕರು ತಮ್ಮ ತಮ್ಮ ಮತಕ್ಷೇತ್ರಗಳಲ್ಲಿ ಇಂತಹ ಯೋಜನೆಗಳನ್ನು ರೈತರ ಸಹಯೋಗದಲ್ಲಿ ಅನುಷ್ಠಾನಕ್ಕೆ ತಂದಲ್ಲಿ ಒಕ್ಕಲುತನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು. 

ಗುಂಡೇವಾಡಿಯ ಶ್ರೀಮಂತ ಪಾಟೀಲ ಏತ ನೀರಾವರಿ ಸಂಘದ ಸಚೀನ ವೀರ ಮಾತನಾಡಿ, ಶ್ರೀಮಂತ ಪಾಟೀಲರು ಶಾಸಕರಾಗುವ ಮೊದಲೇ ಈ ಎಲ್ಲ ನೀರಾವರಿ ಯೋಜನೆಗಳನ್ನು ಅನಿಷ್ಠಾನಗೊಳಿಸಿದ್ದಾರೆ ಇದರಿಂದ ಈ ಭಾಗದ ಸಾವಿರಾರು ಎಕರೆ ಭೂಮಿ ನೀರಾವರಿಗೊಳಪಟ್ಟಿದೆ ಎಂದರು. 

ಭರವಸೆ ಸಮಿತಿ ಸದಸ್ಯ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ಭರವಸೆ ಸಮೀತಿಯ ಸದಸ್ಯರು ಹಿಪ್ಪರಗಿ ಆಣೆಕಟ್ಟು ಹಿನ್ನೀರಿನಿಂದ ತೊಂದರೆಗೊಳಗಾದ  ಸಂತ್ರಸ್ತರ ಪುನರ್ ವಸತಿ ಯೋಜನೆ ಹಾಗೂ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು ಎಂದ ಅವರು ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು. 

ಭರವಸೆ ಸಮೀತಿಯ ಬೈಂದೂರ ಶಾಸಕ ಬಿ.ಎಂ.ಸುಕುಮಾರಶೆಟ್ಟಿ, ಯಾದಗೀರ ಶಾಸಕ ವೆಂಕಟರೆಡ್ಡಿ ಮುದ್ನಾಳ, ದೇವರ ಹಿಪ್ಪರಗಿ ಶಾಸಕ ಸೋಮನಾಥಗೌಡ ಪಾಟೀಲ, ಸಂಬರಗಿ, ಜಂಬಗಿ, ಮದಭಾವಿ, ಗುಂಡೇವಾಡಿಗೆ ಬೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ನೀರಾವರಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಅಧೀಕ್ಷಕ ಅಭಿಯಂತರ ಆರ್‌.ಬಿ.ರಾಠೋಡ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ತಹಶಿಲ್ದಾರ ಸುರೇಶ ಮುಂಜೆ, ಬಿಜೆಪಿ ಮುಖಂಡರಾದ ಶ್ರೀನಿವಾಸ ಪಾಟೀಲ, ಶಿವಾನಂದ ಗೊಲಭಾವಿ, ಸಂಭಾಜಿ ವೀರ, ರಾಮ ಸೊಡ್ಡಿ, ಅಬ್ದುಲ್ ಮುಲ್ಲಾ, ಅಣ್ಣಪ್ಪ ಮಿಸಾಳ, ಬಾಳಪ್ಪ ಆಜೂರ, ನಾನಾ ಪಾಟೀಲ, ಮಾರುತಿ ಜಾಧವ, ಹುಚ್ಚಪ್ಪಾ ಗುಂಜಿಗಾವಿ, ಕುಮಾರ ಗೋಕಾಕ, ಮಹಾದೇವ ಗುಂಜಿಗಾವಿ, ಕಲಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ