ಸಿಂಧಗಿ

ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ

ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ

ಸಿಂದಗಿ 12: ರಾಜ್ಯ ಹಾಗೂ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಗಾವಿಯ ಸುವರ್ಣಸೌಧಲ್ಲಿ ಚರ್ಚೆಯಾಗಿ ಪರಿಹಾರ ನಿಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗುತ್ತಿಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮೀತಿ ರಾಂಪೂರ ಪಿ.ಎ., ಸಿಂದಗಿ ಚಂದ್ರಶೇಖರ ದೇವರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ಸೋಮವಾರ ಪತ್ರಿಕಾ ಹೇಳಿಕೆ ನಿಡಿದ ಅವರು, ಸರ್ಕಾರ ಉತ್ತರ ಕರ್ನಾಟಕದಲ್ಲಿ 10 ದಿನಗಳ ಕಾಲ ಪ್ರವಾಸಕ್ಕೆ ಬಂದು ಹೋಗುವ ನೆಪ ಮಾಡಿಕೊಂಡು ಹೋಗುತ್ತಾರೆ. ಇಂತಹ ಅಧಿವೇಶನ ನಮಗೆ ಬೇಕಾಗಿಲ್ಲ, ಕೂಡಲೇ ರೈತರಿಗೆ ಅನುಕೂಲ ಆಗುವ ಯೋಜನೆಗಳನ್ನು ತರಬೇಕು ಎಂದು ಆಗ್ರಹಿಸಿದರು.  

ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರತಿ ಎಕರೆಗೆ 50ಸಾವಿರ ರೂ. ಪರಿಹಾರ ನೀಡಬೇಕು. ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದನ್ನು ಬಿಟ್ಟು ಸರ್ಕಾರದಿಂದಲೇ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ. 

ರೈತರ ಕೃಷಿ ಪಂಪಸೆಟ್‌ಗಳಿಗೆ ಹಗಲು 12 ಘಂಟೆ 3 ಫೆಸ್ ಉಚಿತ ವಿದ್ಯುತ್ ನೀಡಬೇಕು. ಬಾಕಿ ಉಳಿದ ಬೆಳೆ ವಿಮೆಯನ್ನು ಕೊಡಬೇಕು. ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸಬೇಕು. ಪ್ರತಿ ಟನ್ ಕಬ್ಬಿಗೆ 5ಸಾವಿರ ರೂ. ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ