ಕುಷ್ಟಗಿ

ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಶಿಕ್ಷಣವನ್ನು ಪಡೆಯಲಿ: ಶಾಸಕ ಅಮರೇಗೌಡ

ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಶಿಕ್ಷಣವನ್ನು ಪಡೆಯಲಿ: ಶಾಸಕ ಅಮರೇಗೌಡ


ಲೋಕದರ್ಶನ ವರದಿ 

ಕುಷ್ಟಗಿ 25: ಆಸ್ತಿಗಳಲ್ಲಿ ಪಾಲು ಕೇಳುವುದು ಸಹಜ, ಆದರೆ ನೀವು ಕಷ್ಟಪಟ್ಟು ಪಡೆದ ವಿದ್ಯೆಯಲ್ಲಿ ಯಾರು ಪಾಲು ಕೇಳಲು ಬರುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಶಿಕ್ಷಣವನ್ನು ಪಡೆಯಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.  

ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಬೆಳಗ್ಗೆ ಇಲ್ಲಿನ ಅನ್ನದಾನೇಶ್ವರ ಸಭಾಭವನದಲ್ಲಿ ಏರಿ​‍್ಡಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಅಷ್ಟಾವರಣ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಕಡಿಮೆ ವೆಚ್ಚದಲ್ಲಿ ಉನ್ನತಮಟ್ಟದ ವ್ಯಾಸಂಗ ಪಡೆಯಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ತೆರೆಯಲಾಗಿದೆ.  

ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರಯತ್ನದಲ್ಲಿ ಪ್ರತಿಫಲವಿದೆ, ಶಿಕ್ಷಕರು ಮಕ್ಕಳಿಗೆ  ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆದೇಶಿಸಿದರು. ಮಠಮಾನ್ಯಗಳಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಅತ್ಯಂತ ಸಂಸ್ಕಾರದಿಂದ ಇರುತ್ತಾರೆ ಎಂದು ಹೇಳಿದರು.  

ಅನ್ನದಾನ ವಿಜಯ ವಿದ್ಯಾಪ್ರಸಾರದ ಸಮಿತಿ ಕಾರ್ಯದರ್ಶಿ ದೇವಂದ್ರ​‍್ಪ ಬಳೂಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಮೇಲ್ವಿಚಾರಕ ಎಂ.ಎಸ್ ಧಡೇಸೂರಮಠ, ಸಿಎಂ ಹಿರೇಮಠ, ಮಹಾಂತಯ್ಯ ಹಿರೇಮಠ, ಶರಣಪ್ಪ ಕುಡಿತಿನಿ, ಅಂದಪ್ಪ ಬೀಳಗಿ, ಭೀಮನಗೌಡ ಜಾಲಿಹಾಳ, ಉಪನ್ಯಾಸಕರಾದ ಮಂಜುನಾಥ ನಾಯಕ, ವಿನಾಯಕ ಜಾದವ್ ವಿಶ್ವನಾಥ ತೊಂಡಿಹಾಳ ಸೌಂದರ್ಯ ಲೂತಿಮಠ ಸೇರಿದಂತೆ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  

ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಶ್ರೀಕಾಂತ್ ಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ನೀಲಮ್ಮ ಟೆಂಗುಂಟಿ ಸಂಗಡಿಗರು ಪ್ರಾರ್ಥಿಸಿದರು. ವಾಯ್‌.ಎಲ್ ಕಡೇಮನಿ ಸ್ವಾಗತಿಸಿದರು. ಹನುಮಂತಪ್ಪ ಸಿರವಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ