ಸರಕಾರಿ ಶಾಲೆಗಳು ಉನ್ನತವಾಗಿ ಬೆಳೆಯಲಿ : ಶಂಕರ
ಶಿಗ್ಗಾವಿ,26: ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು ಬೇಕಾಗುವ ಮೂಲಭೂತ ಸಲಕರಣೆಗಳನ್ನು ಪ್ರತಿಯೊಂದು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದು ಮಾಜಿ ಸಚಿವ ಆರ್ ಶಂಕರ ಹೇಳಿದರು.
ತಾಲೂಕಿನ ಮಮದಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 100 ಬ್ಯಾಗ್ ವಿತರಣೆ ಮಾಡಿ ಮಾತನಾಡಿದವರು ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿ ಬೆಳೆದು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆತು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಮುನ್ನಡೆ ನಡೆಸಲು ಸಾಧ್ಯವಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ಸ್ವಾವಲಂಬಿ ಬದುಕು ಬದುಕಲು ಈ ಸರ್ಕಾರಿ ಶಾಲೆಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ಬೆಂಡಲ್ಗಟ್ಟಿ ಮಾತನಾಡಿ ಸರ್ಕಾರಿ ಶಾಲೆಗಳು ಕರ್ನಾಟಕ ರಾಜ್ಯದ ಆತ್ಮವಾಗಿ ಕಾರ್ಯನಿರ್ವಹಿಸುತ್ತಿವೆ ಉತ್ತಮ ರೀತಿಯ ಫಲಿತಾಂಶ ಹಾಗೂ ಕೌಶಲ್ಯವುಳ್ಳ ಮಕ್ಕಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದು ಇನ್ನೂ ಕೆಲವು ಮೂಲಭೂತ ಸೌಕರ್ಯಗಳು ಗ್ರಾಮೀಣಮಟ್ಟದ ಸರ್ಕಾರಿ ಶಾಲೆಗಳಿಗೆ ಸಿಕ್ಕರೆ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಈರಣ್ಣ ಪೂಜಾರ, ಆನಂದ ಲಮಾಣಿ ಮುಖ್ಯ ಶಿಕ್ಷಕಿ ಮಂಜುಳಾ ಮರಳನ್ನವರ, ಸಹ ಶಿಕ್ಷಕರಾದ ಗಣೇಶ ಪೂಜಾರ, ಕಾಸಿಂಸಾಬ ಕಾರಟಗಿ, ಮಾಂತೇಶ ಕಮ್ಮಾರ ಇದ್ದರು.