ಪ್ರತಿದಿನ ಯೋಗದಿಂದಲೇ ಪ್ರಾರಂಭವಾಗಲಿ: ಎನ್.ಆರ್.ಠಕ್ಕಾಯಿ
Let every day begin with yoga: N.R. Thakkai
ಬೈಲಹೊಂಗಲ, 21 : ಪ್ರತಿದಿನ ಯೋಗದಿಂದಲೇ ಆರಂಭವಾದರೆ ಜೀವನಲ್ಲಿ ನೆಮ್ಮದಿಗೆ ಕೊರತೆಯಿರುವುದಿಲ್ಲ ಎಂದು ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗ ಮಾಡುವುದರಿಂದ ಉತ್ಸಾಹ, ಚೈತನ್ಯ, ಆಸಕ್ತಿ ಹೆಚ್ಚಾಗುವುದಲ್ಲದೇ ಉತ್ತಮ ಆರೋಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಇತಿಹಾಸ ತಿಳಿಸಿಕೊಡುವುದರ ಜೊತೆಗೆ ವಜ್ರಾಸನ, ಪದ್ಮಾಸನ, ಚಕ್ರಾಸನ ಮುಂತಾದ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟರು. ಯೋಗಮಂತ್ರ, ಓಂಕಾರ ಹಾಗೂ ಯೋಗ ಪ್ರತಿಜ್ಞೆ ಬೋಧಿಸಲಾಯಿತು. ವಿದ್ಯಾರ್ಥಿಗಳಾದ ಸೃಷ್ಠಿ ಹಿರೇಮಠ, ಭಾಗ್ಯಶ್ರೀ ಬಡಿಗೇರ, ವಿದ್ಯಾ ಕುಲಕರ್ಣಿ ಯೋಗದ ಉಪಯೋಗದ ಕುರಿತು ಭಾಷಣ ಮಾಡಿದರು.
ಕಾರ‌್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ಭೀಮಪ್ಪ ಪಾಶ್ಚಾಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾನಿಕಾ ಕುಲಕರ್ಣಿ ನಿರೂಪಿಸಿದರು. ಚೇತನಾ ಗಡಾದ ಸ್ವಾಗತಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 