ರಾಣೆಬೆನ್ನೂರ

‘ಯಂತ್ರಚಾಲಿತ ವಾಹನಗಳನ್ನು ವಿಕಲಚೇತನರು ಸದುಪಯೋಗಪಡೆದುಕೊಳ್ಳಲಿ’

‘ಯಂತ್ರಚಾಲಿತ ವಾಹನಗಳನ್ನು ವಿಕಲಚೇತನರು ಸದುಪಯೋಗಪಡೆದುಕೊಳ್ಳಲಿ’

ರಾಣೀಬೆನ್ನೂರ 09:  ಜಿಲ್ಲಾ ಹಿರಿಯ ವಿಕಲಚೇತನರ ಸಬಲೀಕರಣ ಇಲಾಖೆ ಅಡಿಯಲ್ಲಿ ಕೊಡ ಮಾಡುವ 2020-21ನೇ ಸಾಲಿನ ವಿಕಲಚೇತನರ ಯಂತ್ರ ಚಾಲಿತ ವಾಹನಗಳನ್ನು ಇಲ್ಲಿನ ತಾಲೂಕ ಪಂಚಾಯ್ತಿ ಆವರಣದಲ್ಲಿರುವ  ಶಾಸಕರ ಸಾಮರ್ಥ್ಯಸೌಧದ ಮುಂಭಾಗದಲ್ಲಿ ಶಾಸಕ ಅರುಣಕುಮಾರ ಪೂಜಾರ ಮತ್ತು ಪಕ್ಷದ ಮುಖಂಡರು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರುಣಕುಮಾರ ಅವರು ವಿಕಲಚೇತನರು ನಮ್ಮಂತೆ ಅವರು ಮಾನವರು ಅನೇಕ ರೀತಿಯಲ್ಲಿ ತೊಂದರೆಯನ್ನು ಅನುಭವಿಸುತ್ತ ಪ್ರಯಾಣಿಸುವ ಅವರ ಸಹಜ ಅನುಕೂಲತೆಗಾಗಿ ಸರ್ಕಾರ ಅವರದೇ ಆದ ಇಲಾಖೆಯ ಮೂಲಕ ಆಯ್ಕೆ ಮಾಡಿ  ಅವರಿಗೆ ಇಂತಹ ಯಂತ್ರಚಾಲಿತ ವಾಹನಗಳನ್ನು ವಿತರಿಸಲು ಮುಂದಾಗಿದೆ. ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಂಡು ನಮ್ಮಂತೆ ಸಹಜವಾಗಿ ಪ್ರಯಾಣ ಮಾಡುವುದರ ಮೂಲಕ ಸ್ವಾಭಿಮಾನದಿಂದ ಬದುಕು ಸಾಗಿಸಬೇಕೆಂದರು. 

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ಮುಖಂಡರಾದ ಬಸವರಾಜ ಚಳಗೇರಿ, ಬಸವರಾಜ ಹುಲ್ಲತ್ತಿ, ಪವನ್ ಮಲ್ಲಾಡದ, ಅರ್ಜುನ್ ಬಣಕಾರ, ಪಕ್ಕೀರ​‍್ಪ ತುಮ್ಮಿನಕಟ್ಟಿ ಸೇರಿದಂತೆ ಮತ್ತಿತರರು,ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ