ಎಲ್ಲಾ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಯಾಗಲಿ : ಎನ್‍ಸಿಪಿ ವಕ್ತಾರ ಖುಂಗೆರ್ ಒತ್ತಾಯ
ಔರಂಗಾಬಾದ್, ಡಿ 04: ದೇಶದ ಪ್ರತಿ ಚುನಾವಣೆಯಲ್ಲೂ
ಬ್ಯಾಲೆಟ್ ಪೇಪರ್ ಬಳಸಬೇಕೆಂದು ಎನ್‌ಸಿಪಿ ರಾಜ್ಯ ವಕ್ತಾರ ಮತ್ತು ಹಿರಿಯ ನಾಯಕ ಸುರ್ಜಿತ್ ಸಿಂಗ್
ಖುಂಗರ್ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಯುಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ನ್ಯಾಯಸಮ್ಮತ, ಸರಿಯಾದ ಮಾರ್ಗವೆಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನ್ಯಾಯಯುತ ಮತ್ತು ಸರಿಯಾದ ಮಾರ್ಗ ಇದಾಗಿದೆ. ವಿದೇಶಗಳಲ್ಲಿಯೂ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಯಾಗುತ್ತಿದೆ ಎಂದು ಖುಂಗರ್ ತಿಳಿಸಿದ್ದಾರೆ.