ರಾಣೆಬೆನ್ನೂರ

ಯುವಜನತೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಯೋಗದಲ್ಲಿ ತೊಡಗಿಸಿಕೊಳ್ಳಿ

ಯುವಜನತೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು  ಯೋಗದಲ್ಲಿ ತೊಡಗಿಸಿಕೊಳ್ಳಿ

ರಾಣೇಬೆನ್ನೂರು 16:  ಮಧ್ಯರಾತ್ರಿ ಒಂದೆರಡು ಗಂಟೆವರೆಗೆ ಮೊಬೈಲ್‌ನೊಂದಿಗೆ ಅನವಶ್ಯಕವಾಗಿ ಕಾಲಹರಣ ಮಾಡಿ, ಬೆಳಗ್ಗೆ 9 ಗಂಟೆಗೆ ಎದ್ದೇಳುವುದನ್ನು ಯುವಜನತೆ ಬಿಟ್ಟು ಸೂರ್ಯೋದಯಕ್ಕಿಂತ ಮುಂಚೆ ಎದ್ದು  ದೈಹಿಕ ವ್ಯಾಯಮ, ಕ್ರೀಡೆ ಹಾಗೂ ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಭಾರತದ ಪ್ರತಿಯೊಬ್ಬ ನಾಗರಿಕರೆಲ್ಲರೂ ದೈಹಿಕ ಮತ್ತು ಮಾನಸಿಕವಾಗಿ ಫಿಟ್ನೆಸ್ ಹೊಂದಿದಲ್ಲಿ ನಮ್ಮ ದೇಶವು ಪ್ರಧಾನಿಯವರ ಕನಸಿನಂತೆ "ಫಿಟ್ ಇಂಡಿಯಾ" ಆಗಲು ಸಾಧ್ಯವಿದೆ ಎಂದು ಪ್ರಾಂಶುಪಾಲ ಎಲ್‌.ವಿ.ಸಂಗಳದ ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಎನ್ನೆಸ್ಸೆಸ್ ಕ್ರೀಡಾ ವಿಭಾಗ ಹಾಗೂ ಯುವ ರೆಡ್ ಕ್ರಾಸ್ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಕೋಶವು  ಜಂಟಿಯಾಗಿ ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆ  ನಿಮಿತ್ತ  "ಆಜಾದಿ ಕಾ ಅಮೃತ್ ಮಹೋತ್ಸವ್" ಅಡಿಯಲ್ಲಿ ಆಯೋಜಿಸಿದ್ದ "ಫಿಟ್ ಇಂಡಿಯಾ ಫ್ರೀಡಮ್ ರನ್" ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು. ಆರೋ​‍್ಯಗ್ಯದ ಅರಿವಿಲ್ಲದೆ ಯುವಕರು ಸೇರಿದಂತೆ ವಯಸ್ಕರು ಹಾಗೂ ಹಿರಿಯ ನಾಗರಿಕರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.  ದೈಹಿಕ ವ್ಯಾಯಾಮ ಇಲ್ಲದೆ ಬಿಪಿ ಶುಗರ್, ಮೈಬೊಜ್ಜು ಇಂತಹ ಕೆಲವು ಕಾಯಿಲೆಗಳು ಸರ್ವೆ ಸಾಮಾನ್ಯವಾಗಿದೆ. ಇದರಿಂದ ಹೊರಬರಬೇಕಾದರೆ ಪ್ರತಿದಿನ ಕನಿಷ್ಠ ಒಂದು ಗಂಟೆಯ ದೈಹಿಕ ಶ್ರಮ ಅಗತ್ಯ ಎಂದರು. 

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಉಪನ್ಯಾಸಕರಾದ ಡಾ ಎ.ವಿ. ಕುರ್ಲಿ ಮಾತನಾಡಿ,  ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ಮಹನೀಯರ ಜೀವನಾದರ್ಶಗಳನ್ನು  ಇಂದಿನ ಯುವಜನರು ಅಳವಡಿಸಿಕೊಳ್ಳಬೇಕು. 75ನೇ ವಷಾ9ಚರಣೆಯ ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಇತಿಹಾಸವನ್ನು ಪ್ರತಿಯೊಬ್ಬರೂ ನೆನೆಪಿಸಿಕೊಳ್ಳಲೇಬೇಕು ಎಂದರು. ಇನ್ನೋವ9 ಅತಿಥಿಗಳಾದ ಡಾ.ವೆಂಕಟೇಶ್ ಎಚ್‌. ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಸಮಾನತೆ ಬಂದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂಬ ಡಾ.ಅಂಬೇಡ್ಕರ್ ರವರ ಮಾತನ್ನು ವಿವರಿಸಿದರು. 

ಎನ್‌ಎಸ್‌ಎಸ್ ಅಧಿಕಾರಿ ಡಾ. ಅರುಣಕುಮಾರ್ ಚಂದನ್ ಅವರು "ಫಿಟ್ ಇಂಡಿಯಾ ಫ್ರೀಡಂ ರನ್" ಕಾರ್ಯಕ್ರಮದ ಕುರಿತು ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಕೆ. ರಾಘವೇಂದ್ರರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಸಂಗೀತಾ ದೊಡ್ಡಮನಿ ಪ್ರಾರ್ಥಿಸಿದರು. ಐಕ್ಯೂಎಸಿ ಸಂಚಾಲಕರಾದ  ಎಸ್‌. ಬಿ. ಪಾಟೀಲ್ ವಂದಿಸಿದರು. 

ಫ್ರೀಡಂ ರನ್‌: ಕಾರ್ಯಕ್ರಮದ ನಂತರ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಯುವಜನರನ್ನು ಪ್ರೇರೇಪಿಸಲು *ಫ್ರೀಡಂ ರನ್* ನಲ್ಲಿ  ಪಾಲ್ಗೊಂಡರು. ಆರ್‌.ಎಫ್‌.ಅಯ್ಯನಗೌಡ್ರ, ಡಾ.ಶೋಭಾ ಸಾವಕಾರ, ಡಾ.ಎಲ್‌.ಎಮ್‌.ಪೂಜಾರ, ಗೀತಾ ಕೋಟೆಣ್ಣನವರ, ರಾಜಶೇಖರ ಚಕ್ಕಿ, ಡಾ.ಎಸ್‌.ಕೆ.ಪಾಟೀಲ, ಎಸ್‌.ಎಂ.ಸೀತಾಳದ, ಅಂಬಿಕಾ ಹೊಸಮನಿ, ಮಮತಾ ಸಾವಕಾರ, ಬಸವರಾಜ ಹುಗ್ಗಿ, ಬಸವರಾಜಪ್ಪ ಪಿ.ಟಿ., ಸಿ.ಎನ್‌.ಪೂಜಾರ, ಸಾಯಿದಾ ಬಾನು, ಸುನೀಲ ಎಂ.ಎಚ್‌., ಹಣಮಂತಗೌಡ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. 


ಸುದ್ದಿ ಓದಿ