ಸಮಾವೇಶದ ಯಶಸ್ವಿಗೆ ಒಗ್ಗೂಡಿ ಕೆಲಸ ಮಾಡೋಣ: ವೀರಶೈವ ಮಹಾಸಭಾ
ಬಳ್ಳಾರಿ 24: ಅಖಿಲ ಭಾರತ ವೀರಶೈವ - ಲಿಂಗಾಯಿತ ಮಹಾಸಭಾದ ನೇತೃತ್ವದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಘಟಕ ಸೆಪ್ಟಂಬರ್ 10ರ ಭಾನುವಾರ ಏರಿ್ಡಸಿರುವ ವೀರಶೈವ -ಲಿಂಗಾಯಿತ ಜನಜಾಗೃತಿ ಸಮಾವೇಶ, ಡಾ. ಎನ್. ತಿಪ್ಪಣ್ಣ ಅವರ ಅಭಿನಂದನಾ ಸಮಾವೇಶ ಹಾಗೂ ಪರಮ ಪೂಜ್ಯ ಹಾನಗಲ್ ಶ್ರೀಕುಮಾರಸ್ವಾಮಿಗಳ 156ನೇ ಜಯಂತ್ಯುತ್ಸವದ ಪೂರ್ವಭಾವಿ ಸಭೆ ಬಸವ ಭವನದಲ್ಲಿ ಗುರುವಾರ ನಡೆಯಿತು.
ಕಮ್ಮರಚೇಡು ಕಲ್ಯಾಣಸ್ವಾಮಿ ಮಠದ ಕಲ್ಯಾಣಸ್ವಾಮಿಗಳು ಸಮಾವೇಶದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ, ಸಮಾಜದಲ್ಲಿಯ ಎಲ್ಲಾ ಒಳಪಂಗಡಗಳು ಒಗ್ಗೂಡಿ ಕರ್ನಾಟಕದಲ್ಲಿ ಪುನಃ ರಾಜಕೀಯ ಅಧಿಕಾರವನ್ನು ಪ್ರತಿಷ್ಠಾಪಿಸಲಿಕ್ಕಾಗಿ ಶಕ್ತಿಯಾಗಿ ನಮ್ಮ ಸಾಮಥ್ರ್ಯವನ್ನು ಪ್ರದರ್ಶನ ಮಾಡಲು ಈ ಸಮಾವೇಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ಅವರು ಅತಿಥಿಗಳಾಗಿ ಮಾತನಾಡಿ, ಶೆಟ್ರಗುರುಶಾಂತಪ್ಪ ಕಾಲೇಜಿನ ಮೈದಾನದಲ್ಲಿ ಸೆಪ್ಟಂಬರ್ 10 ರ ಭಾನುವಾರ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಮಾಜದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೋರಿದರು.
ಅಲ್ಲದೇ, ಸಮಾವೇಶದ ಯಶಸ್ವಿಗೆ ಅಖಂಡ ಜಿಲ್ಲೆಯ ಪ್ರತಿ ಹಳ್ಳಿಗೂ ಮಾಹಿತಿ ತಲುಪುವಂತೆ ವ್ಯಾಪಕ ಪ್ರಚಾರನಡೆಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಸ್ವಯಂ ಪ್ರೇರೇಪಿತರಾಗಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. 2021-22 ಮತ್ತು 2022-23ರ ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ನಟರಾಜ್ ಅವರು, ಸಮಾವೇಶದ ಯಶಸ್ವಿಗಾಗಿ ರಚನೆಯಾಗಿರುವ ವಿವಿಧ ಸಮಿತಿಗಳ ಜವಾಬ್ದಾರಿಗಳ ನಿರ್ವಹಣೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಿದರು. ಡಾ. ಎನ್. ತಿಪ್ಪಣ್ಣ ಅವರ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಶೋದನಾತ್ಮಕವಾದ ಅಭಿನಂದನಾ ಗ್ರಂಥವನ್ನು ಮತ್ತು ಬಳ್ಳಾರಿ ಕಾರ್ಯಕ್ರಮ ಸಂಘಟಕರು ಸ್ಮರಣ ಸಂಚಿಕೆಯನ್ನು ಪ್ರಕಟಿಸುವ ಕುರಿತು ವಿವರಿಸಿದರು.
ಲಿಂಗೈಕ್ಯ ಡಾ. ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮೀಜಿ ಅವರಿಗೆ ‘ಹಾನಗಲ್ಲು ಕುಮಾರೇಶ್ವರ ಪ್ರಶಸ್ತಿ', ಅಖಿಲ ಭಾರತ ವೀರಶೈವ - ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ ಅವರಿಗೆ ‘ಶರಣ ಶ್ರೀ ಸಕ್ಕರೆ ಕರಡೀಶ ಪ್ರಶಸ್ತಿ' ಮತ್ತು ಅಖಿಲ ಭಾರತ ವೀರಶೈವ - ಲಿಂಗಾಯಿತ ಮಹಾಸಭೆಯ ರಾಷ್ಟ್ರಾಧ್ಯಕ್ಷ ಶ್ಯಾಮನೂರು ಶಿವಶಂಕರ್ಪ ಅವರಿಗೆ ‘ಶರಣ ಶ್ರೀ ಅಲ್ಲೀಪುರದ ಮಹಾದೇವ ತಾತ ಪ್ರಶಸ್ತಿ' ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪ ಅವರಿಗೆ ‘ಬಸವ ಶ್ರೀ' ಪ್ರಶಸ್ತಿಯನ್ನು ನೀಡುವುದರ ಜೊತೆಯಲ್ಲಿ ಉಜ್ಜಯಿನಿ ಸದ್ಧರ್ಮಪೀಠದ ಜಗದ್ಗುರು ಸಿದ್ದಲಿಂಗ ಭಗವತ್ಪಾದರ ಹೆಸರಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲು ಕೆ.ಎಂ. ಮಹೇಶ್ವರಸ್ವಾಮಿ ಅವರು, ವಿಷಯ ಪ್ರಸ್ತಾಪ ಮಾಡಿದರು. ಆಗ, ಎಚ್.ಎಂ. ರೇಣುಕಾ ಪ್ರಸನ್ನ ಅವರು, ಉಜ್ಜಯಿನಿ ಜಗದ್ಗುರುಗಳ ಸಿದ್ದಲಿಂಗ ಶ್ರೀಗಳ ಹೆಸರಲ್ಲಿ ಅರ್ಹರನ್ನು ಹುಡುಕಿ ಪ್ರಶಸ್ತಿ ನೀಡುವುದಾಗಿ ಸಭೆಗೆ ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಮನಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಅರವಿ ಬಸವನಗೌಡ,
ಕೆ.ಎಂ. ಮಹೇಶ್ವರಸ್ವಾಮಿ, ಯ್ಯಾಳ್ಪಿ ಪೊಂಪನಗೌಡ, ಕೋರಿ ವಿರೂಪಾಕ್ಷಪ್ಪ, ಜಾನೆಕುಂಟೆ ಸಣ್ಣಬಸವರಾಜ (ಕುಮ್ಮಿ), ಮುಖಂಡರಾದ ಚೊಕ್ಕ ಬಸವನಗೌಡ, ಚೋರನೂರು ಕೊಟ್ರ್ಪ, ಅಖಿಲ ಭಾರತ ವೀರೈಶವ ಮಹಾಸಭಾದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸರೆಡ್ಡಿ, ಆಂಧ್ರ್ರದೇಶದ ಮಹಾಸಭಾದ ರಾಜ್ಯಾಧ್ಯಕ್ಷ ದಂಡಿನ ಶಿವಾನಂದ, ಇನ್ನಿತರರು ವೇದಿಕೆಯಲ್ಲಿದ್ದರು.ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ. ಪಂಚಾಕ್ಷರ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಕಗ್ಗಲ್ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಗಂಗಾವತಿ ವೀರೇರ್ಶ ಅವರು ವಂದನಾರೆ್ಣ ಸಲ್ಲಿಸಿದರು.
ಈ ಸಭೆಯಲ್ಲಿ ವೀರಶೈವ - ಲಿಂಗಾಯಿತ ವಿವಿಧ ಸಂಘಟನೆಗಳ ಮುಖಂಡರು ಮತ್ತು ಗಣ್ಯರು ಪಾಲ್ಗೊಂಡು, ಸಮಾವೇಶದ ಯಶಸ್ವಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.