ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ: ಉಮೇಶ ಪಾಟೀಲ
ಕಾಗವಾಡ, 25 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ದಿ. 23ರಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಣಿ ಸಭೆ ಸಂಪನ್ನಗೊಂಡಿತು.
ಈ ವೇಳೆ ಯುವ ಕಾಂಗ್ರೆಸ್ ಸಮಿತಿಯ ಕಾಗವಾಡ ವಿಧಾನಸಭೆ ಅಧ್ಯಕ್ಷ ಉಮೇಶ ಪಾಟೀಲ ಮಾತನಾಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸಿದ್ಧಿಕ ಅಂಕಲಗಿ ನೇತೃತ್ವದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಮತ್ತು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸುದರ್ಶನ ಜಂತೆನ್ನವರ, ಆಕಾಶ ನಂದಗಾಂವ, ಸಾಗರ ಕಾಂಬಳೆ, ಅಬುಬಕರ ಮುಲ್ಲಾ, ಅಮರ ಸನದಿ, ನಾಗರಾಜ ಕಾಂಬಳೆ, ರಮಜಾನ ಮುಜಾವರ, ಓಂಕಾರ ಕರವ, ಪ್ರಮೋದ ಗುಡೋಡಗಿ, ಸೋಯಬ ಮುಲ್ಲಾ, ಶೀತಲ ಹೇರಳೆಕರ, ಪಾಪು ಧೊಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.