ಮತದಾನ ಮಾಡಿ ಚುನಾವಣಾ ಹಬ್ಬವಾಗಿ ಆಚರಿಸೋಣ: ಜಗದೀಶ ಕಮ್ಮಾರ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024
ಚಿಕ್ಕೋಡಿ 29: ಲೋಕಸಭಾ ಸಾರ್ವತ್ರಿಕ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದ್ದು ಮೇ 7ರಂದು ಜರುಗಲಿರುವ ಮತದಾನ ದಿನದಂದು ಅರ್ಹ ಪ್ರತಿಯೊಬ್ಬ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚುನಾವಣೆಯನ್ನು ಮತದಾನದ ಹಬ್ಬದಂತೆ ಆಚರಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಕ್ಕೋಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ತಿಳಿಸಿದರು.
ತಾಲೂಕಿನ ಅಂಕಲಿ ಗ್ರಾ ಪಂ ಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ ಅಭಿಯಾನದ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನದ ದಿನದಂದು ಅರ್ಹ ಮತದಾರರು ತಪ್ಪದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಪ್ರೇರೆಪಿಸುವಂತೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ಚುನಾವಣೆ ಪ್ರಜಾಪ್ರಭುತ್ವದ ಒಂದು ದೊಡ್ಡ ಹಬ್ಬವಾಗಿದೆ. ಈ ಹಬ್ಬದಲ್ಲಿ ಎಲ್ಲರು ಭಾಗವಹಿಸುವಂತೆ ಹಾಗೂ ಮತದಾನದ ಮಹತ್ವದ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಗ್ರಾಂ ಪಂ ಮಟ್ಟದಲ್ಲಿ ಭಿನ್ನ ವಿಭಿನ್ನ ಕಾರ್ಯಕ್ರಮಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ ಮಾತನಾಡಿ ಅರ್ಹ ಮತದಾರರೆಲ್ಲರೂ ಮತದಾನದಿಂದ ವಂಚಿತರಾಗದಂತೆ ಸ್ವೀಪ್ ಕಾರ್ಯಕ್ರನಗಳನ್ನು ಆಯೋಜಿಸಬೇಕು. ಮನೆ ಮನೆಗೆ ಬೇಟಿ ನೀಡಿ ಮತದಾನದಮಹತ್ವ ಕುರಿತು ಅರಿವು ಮೂಡುಸಬೇಕು ಎಂದರು.
ಈ ಸಂದರ್ಭದಲ್ಲಿ ತಾ ಪಂ ವ್ಯವಸ್ಥಾಪಕ ಉದಯಗೌಡಾ ಪಾಟೀಲ್ ,ಗ್ರಾಂ ಪಂ ಪಿಡಿಒ ವಿನೋದ ಅಸೋದೆ ಕಾರ್ಯದರ್ಶಿ ಪದ್ಮಣ್ಣ ಕುಂಬಾರ ,ಐಇಸಿ ಸಂಯೋಜಕರು ರಂಜೀತ ಕಾರ್ಣಿಕ, ಆಡಳಿತ ಅಧಿಕಾರಿಗಳು ಸೋಮಶೇಖರ್ ಗವಿ, ಅಂಗನವಾಡಿ ಮೇಲ್ವಿಚಾರಕಿ ಉಜ್ವಲಾ ಸೇರಿದಂತೆ ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿ.ಎಲ್.ಒ ಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.