ಶಿಗ್ಗಾವ್

ಮೋದಿಜಿಯವರ 9 ವರ್ಷದ ಸಾಧನೆ ಮನೆಮನೆಗೆ ತಿಳಿಸೋಣ: ಮ್ಯಾಗೇರಿ

ಮೋದಿಜಿಯವರ 9 ವರ್ಷದ ಸಾಧನೆ ಮನೆಮನೆಗೆ ತಿಳಿಸೋಣ: ಮ್ಯಾಗೇರಿ

ಶಿಗ್ಗಾವಿ 27:  ಪ್ರಧಾನಿ ನರೇಂದ್ರ ಮೋದಿಜಿಯವರ 9 ವರ್ಷದ ಸಾಧನೆಯನ್ನು ಮನೆಮನೆಗೆ ತಿಳಿಸೋಣ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ ಹೇಳಿದರು. 

ಪಟ್ಟಣದ ಬಾಜಫಕಾರ್ಯಾಲಯದಲ್ಲಿ ಮೇರಾ ಬೂತ್ ಸಬ್‌.ಸೇ ಮುಜಬೂತ್ ಎಂಬ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದಅವರು 9 ವರ್ಷದಿಂದಕೇಂದ್ರ ಸರಕಾರ ಪ್ರಧಾನಿ ನರೇಂದ್ರ ಮೋದಿಜಿಅವರುಜನಕಲ್ಯಾಣಕಾರ್ಯಕ್ರಮ ಮಾಡುವಾಗಯಾವುದೇ ಶರತ್ತು ವಿಧಿಸದೆಅರ್ಜಿ ತೆಗೆದುಕೊಳ್ಳದೆ ಜನರನ್ನು ಸತಾಯಿಸದೆ ನೇರವಾಗಿ ಅನೇಕ ಜನಪರ ಯೋಜನೆಗಳಾದ ಗ್ಯಾಸ್ ಸಿಲೆಂಡರ್ ಶೌಚಾಲಯ ಪ್ರಧಾನ ಮಂತ್ರಿಆವಾಸ್‌ಯೋಜನೆ ಹರ್‌ಗರ್‌ಜೈಲ್‌. ಬ್ಯಾಂಕ್‌ಖಾತೆ. ಕೋವಿಡ್ ಲಿಸಿಕೆ.ಪಡಿತರ ಅಕ್ಕಿ.ರೈತರಖಾತೆಗೆಆರು ಸಾವಿರದನ ಸಹಾಯ. ಸೇರಿ ಹತ್ತು ಹಲವಾರುಜನಪರ ಯೋಜನೆಗಳನ್ನು ಜಾರಿ ಮಾಡಿ ಇವುಗಳ ಪ್ರಚಾರ ಪಡೆಯಿದೆ ಫಲಾನುಭವಿಗಳ ಮನೆಗೆ ಮತ್ತುಅವರ ಬ್ಯಾಂಕ್‌ಖಾತೆಗೆ ನೇರವಾಗಿಯೋಜನೆ ತಲುಪಿಸಿದ್ದು ಎಲ್ಲರಿಗೂ ತಿಳಿದ ವಿಚಾರ .ಇವುಗಳನ್ನು ನಾವು ಕರಪತ್ರದ ಮುಖಾಂತರ ಮುದ್ರಿಸಿ ಮನೆ ಮನೆಗೆ ತೆರಳಿ ಜನರಿಗೆ ಮುಟ್ಟಿಸುವಕಾರ್ಯದಲ್ಲಿತೊಡಗಿದ್ದೇವೆಎಂದರು. 

ಸುಳ್ಳು ಹೇಳುವ ಸರ್ಕಾರಕ್ಕೆತಕ್ಕ ಪಾಠ ಕಲಿಸುತ್ತೇವೆ ಈಗ ಪ್ರತಿಯೊಬ್ಬರಿಗೂ ಸಿಗುವ 5 ಕೆಜಿ ಅಕ್ಕಿ ಕೇಂದ್ರದ್ದುಎಂಬುದನ್ನು ಪ್ರಚಾರ ಮಾಡಿದವರೇಕಾಂಗ್ರೆಸ್‌ನವರುತಾವುಚುನಾವಣೆಯ ಪೂರ್ವದಲ್ಲಿಗ್ಯಾರಂಟಿಯಲ್ಲಿಒಂದಾದ 10 ಕೆಜಿ ಅಕ್ಕಿ ಪ್ರತಿಯೊಬ್ಬರಿಗೆಕೊಡುತ್ತೇವೆಎಂದು ಹೇಳಿ  ಈಗಕೇಂದ್ರದಕಡೆ ಬೊಟ್ಟು ಮಾಡಿತೋರಿಸಲು ಹೋಗಿ ಪೇಚಿಗೆ ಸಿಕ್ಕು ಹಾಕಿಕೊಂಡಿದ್ದಾರೆ ಈಗ ಕೇಂದ್ರದ್ದುಐದುಕೆಜಿತಾವು ಹೇಳಿದ್ದು 10 ಕೆಜಿಒಟ್ಟು 15 ಕೆಜಿಕೊಡಬೇಕೆಂದು ನಾವು ಕೂಡಆಗ್ರಹಿಸುತ್ತೇವೆಎಂದರು. 

ಕಾಂಗ್ರೆಸನವರು ಆಡಳಿತಕ್ಕೆ ಬಂದ 24 ಗಂಟೆಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಅಧಿಕಾರ ಪಡೆದ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಈಗ ಸುಳ್ಳು ಹೇಳಿ ಅನೇಕ ಷರತ್ತುಗಳನ್ನು ವಿಧಿಸಿಟೈಮ್ ಪಾಸ್ ಮಾಡುತ್ತಾ ಹೊರಟಿದೆಇವರುಕುಣಿಯಲು ಬಾರದೆ ನೆಲ ಡೊಂಕಿದೆಎಂದು ಹೇಳುತ್ತಾ ಜನರನ್ನುಯಾಮರಿಸುವ ಕೆಲಸ ಮಾಡುತ್ತಿದ್ದಾರೆಇವರಿಗೆ ನಾಡಿನಜನತೆ ಮುಂಬರುವ ಲೋಕಸಭಾಚುನಾವಣೆಯಲ್ಲಿತಕ್ಕ ಪಾಠ ಕಲಿಸುತ್ತಾರೆಎಂದರು.  

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ರೇಣುಕನಗೌಡ ಪಾಟೀಲ್, ಬಸವರಾಜ ನಾರಾಯಣಪುರ,  ಯುವ ಮೋರ್ಚಾರಾಜ್ಯ ಸಮಿತಿ ಸದಸ್ಯನರಹರಿಕಟ್ಟಿ, ಪ್ರಶಾಂತ ಬಡ್ಡಿ, ಮಂಜುನಾಥ್ ಮಿರ್ಜಿ, ಸೇರಿದಂತೆ ಅನೇಕ ಪ್ರಮುಖರು ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ