ವಿವೇಕಾನಂದರ ಆದರ್ಶ ಅನುಸರಿಸಿ ಭಾರತ ವಿಶ್ವಗುರುವನ್ನಾಗಿ ಮಾಡೋಣ
ಶಿಗ್ಗಾವಿ : ವೀರ ಸನ್ಯಾಸಿ ವಿವೇಕಾನಂದರ ಅನುಸರಿಸಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣಎಂದು ನವೀನ ಸಾಸನೂರಕರೆ ನೀಡಿದರು. ಪಟ್ಟಣದ ಜೆಸಿಐ, ಶಿಗ್ಗಾಂವ ಹಾಗೂ ಎಸ್.ಆರ್.ಜೆ.ವ್ಹಿ.ಜಿ. ಪದವಿ ಪೂರ್ವಕಾಲೇಜಿನ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಯುವ ಉದ್ಯಮಿ ನವೀನ ಸಾಸನೂರ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಚರಿತ್ರೆಗಳನ್ನು ಮೆಲುಕು ಹಾಕಿ ಅವರನ್ನು ಅಭ್ಯಾಸ ಮಾಡಿ ಅವರು ನೀಡಿದ ಅತ್ಯುತ್ತಮ ಮಾರ್ಗದರ್ಶನ ಅನುಸರಿಸಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ ಎಂದರು ಮತ್ತುಅವರು ಸಾಕಷ್ಟು ಸಾಧಕರ ಸಾಧನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಭಾರ ಪ್ರಾಚಾರ್ಯಎಸ್. ಎನ್. ತೀರ್ಥಉದ್ಘಾಟನೆ ಮಾಡಿ ಮಾತನಾಡಿದ ಈ ತರಬೇತಿಯ ಲಾಭ ಪಡೆದುಕೊಳ್ಳಲು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಜೆಸಿ ಬಸವರಾಜ ಬಸರೀಕಟ್ಟಿ ಅಧ್ಯಕ್ಷತೆ ವಹಿಸಿದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸೋಣ, ಒಳ್ಳೆಯ ಜ್ಞಾನವನ್ನು ಹೊಂದೋಣ ಎಂದರು. ಧಾರವಾಡದ ವಲಯ ತರಬೇತುದಾರ ಜೆಸಿ ಪ್ರವೀಣದೇಶ ಪಾಂಡೆಯವರು ಪರೀಕ್ಷಾ ತಂತ್ರಗಳ ಬಗ್ಗೆ ಉತ್ತಮ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಯದರ್ಶಿ ಜೆಸಿ ಡಾ. ಚಂದ್ರಿಕಾಕುಮಾರಗೌಡ ಪಾಟೀಲ, ಖಜಾಂಚಿ ಜೆಸಿ ಗೀತಾರಾ ದೇಶಪಾಂಡೆ, ಪೂರ್ವ ವಲಯಾಧಿಕಾರಿ ಜೆಸಿ ಕುಮಾರಗೌಡ ಪಾಟೀಲ, ಜೆಸಿ ರಾಘವೇಂದ್ರ ಆರ್.ದೇಶಪಾಂಡೆ, ಪೂರ್ವಾಧ್ಯಕ್ಷ ಜೆಸಿ ಡಾ.ಡಿ. ಎ. ಗೊಬ್ಬರಗುಂಪಿ ಪದವಿ ಪೂರ್ವ ವಿಭಾಗದ ಹಿರಿಯ ಉಪನ್ಯಾಸಕ ಎಸ್. ವ್ಹಿ. ಕುಲಕರ್ಣಿ, ಎಸ್.ವ್ಹಿ. ಬಳಿಗಾರ, ಎಸ್. ಎಸ್. ಸಿದ್ದಪ್ಪನವರ ಉಪಸ್ಥಿತರಿದ್ದರು.