ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಿಸೋಣ: ದುಂಡಿಗೌಡ್ರ
ಶಿಗ್ಗಾವಿ,26 : ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಿಸುವುದು ನಮ್ಮ ಸಂಸ್ಥೆ ಮೂಲ ಉದ್ದೇಶ ಎಂದು ಭಾಜಪ ಮುಖಂಡ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಚಂದಾಪೂರ ಗ್ರಾಮದ ಪರಶುರಾಮ ದೊಡ್ಮನಿ ಮಗಳಾದ ಕುಮಾರಿ ಮೇಘಾರಾಣಿ ಅವರನ್ನು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಧನ ಸಹಾಯ ನೀಡಿ ಗೌರವಿಸಿ ಸನ್ಮಾನಿಸಿ ಮಾತನಾಡಿದ ಅವರು ಅವರ ಸಹೋಧರ ಹರೀಶ ಪರಶುರಾಮ ದೊಡ್ಮನಿ ಇಬ್ಬರು ಸಹ ಮದ್ಯ ಪ್ರದೇಶದಲ್ಲಿ ಐಐಟಿಯಲ್ಲಿ ವಿದ್ಯಾಬ್ಯಾಸ ಮುಗಿಸಿ ಈಗ ವಿದೇಶದಲ್ಲಿ ಅವಕಾಶ ದೊರಕಿರುವುದೂ ಅವರ ತಂದೆ ತಾಯಿ ಪರಿಶ್ರಮ ಅವರಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿವೆ .ಮುಂದೆ ನೂರಾರು ಯುವಕರಿಗೆ ನಿಮ್ಮ ಸಾಧನೆ ಸ್ಫೂರ್ತಿ ಆಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ತಂದೆ ಪರಶುರಾಮ ದೊಡ್ಮನಿ ಹಾಗೂ ಮಾಜಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಶಿವಾನಂದ ಸೊಬರದ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಬಸವರಾಜ ಕುರಗೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.