ಎಲ್ಲರೂ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಕೆಲಸದಲ್ಲಿ ಪ್ರಭುದ್ದರಾಗಿ : ಪ್ರಾಚಾರ್ಯ ಹಾವೇರಿ
ಶಿಗ್ಗಾವಿ 11 : ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಮನೆಗಳ ಸುತ್ತಮುತ್ತ, ಶಾಲೆಗಳ ಸುತ್ತಮುತ್ತ ಸಸಿಗಳನ್ನು ನೆಟ್ಟು ಪಾಲನೆ ಮಾಡಬೇಕು ಮತ್ತು ಎಲ್ಲರೂ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಕೆಲಸದಲ್ಲಿ ಪ್ರಭುದ್ದರಾಗಬೇಕು ಎಂದು ಪ್ರಾಚಾರ್ಯ ಶಿವು ಹಾವೇರಿ ಹೇಳಿದರು.
ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ಲಾಸ್ಟಿಕ್ ಮಾಲಿನ್ಯ ಸೋಲಿಸಿ ಎಂಬುದು ಈ ವರ್ಷದ ವಿಶ್ವ ಪರಿಸರ ದಿನಾಚರಣೆ ಘೋಷ ವಾಕ್ಯ.ಹೀಗಾಗಿ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸಿ ಜೀವರಾಶಿಯನ್ನು ಉಳಿಸಬೇಕಿದೆ ಪರಿಸರ ಹಾನಿಯಲ್ಲಿ ತನ್ನ ಹಾನಿಯೂ ಸೇರಿದೆ ಎನ್ನುವ ಸರಳ ಸತ್ಯಗೊತ್ತಿದ್ದರೂ ಯಾರೂ ಪರಿಸರ ಸಂರಕ್ಷಣೆಯತ್ತ ಗಮನ ಹರಿಸದಿರುವುದು ಬೇಸರದ ಸಂಗತಿ ಎಂದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರದರ್ಶನ ಏರಿ್ಡಸಿ ಪ್ರತಿ ವರ್ಗದ ವಿದ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಬಗೆಯ ಸಸಿಗಳನ್ನು ಹಚ್ಚಿದರು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.