ರಾಷ್ಟ್ರೀಯ

ಉತ್ತರ ಕಾಶ್ಮೀರ; ವಿದ್ಯುತ್ ತಗುಲಿ ಚಿರತೆ ಸಾವು

ಉತ್ತರ ಕಾಶ್ಮೀರ; ವಿದ್ಯುತ್ ತಗುಲಿ ಚಿರತೆ ಸಾವು

ಶ್ರೀನಗರ, ಸೆಪ್ಟೆಂಬರ್ 6: ಉತ್ತರ ಕಾಶ್ಮೀರದ ಕುಪ್ವಾರದ ಜಿಲ್ಲೆಯಲ್ಲಿ ಚಿರತೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಶನಿವಾರ ರಾತ್ರಿ ಚಿರತೆ ಕುಪ್ವಾರದ ಕರ್ನಾಹ್ ಪಟ್ಟಣದ ಗಡಿಯ ಮೂಲಕ ಚಿರತೆ ಲೋಂಥ ಗ್ರಾಮ ಪ್ರವೇಶಿಸಿತ್ತು. ಆದರೆ, ಮಾರ್ಗ ಮಧ್ಯ ವಿದ್ಯುತ್ ಟ್ರಾನ್ಸ್ಫಾರ್ಮರ್ನ ತಂತಿಯಿಂದ ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ವಿದ್ಯುತ್ ಪ್ರಸಾರ ಇಲಾಖೆ ಟ್ರಾನ್ಸ್ಫಾರ್ಮರ್ ಸುತ್ತಲೂ ಬೇಲಿ ಹಾಕಲು ವಿಫಲವಾಗಿರುವುದೇ ಈ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.


ಸುದ್ದಿ ಓದಿ