‘ಖಾದಿ’ ಹೆಸರು ದುರುಪಯೋಗ ಎರಡು ಸಂಸ್ಥೆಗಳಿಗೆ ಕೆವಿಐಸಿಯಿಂದ ಲೀಗಲ್ ನೋಟೀಸ್
ನವದೆಹಲಿ, ಆಗಸ್ಟ್ 23|: ‘ಖಾದಿ’ ಬ್ರಾಡ್ ಹೆಸರನ್ನು ಅನಧಿಕೃತವಾಗಿ ಹಾಗೂ ಮೋಸದಿಂದ ಬಳಸುತ್ತಿರುವ ಖಾದಿ ಎಸೆನ್ಷಿಯಲ್ಸ್ ಹಾಗೂ ಖಾದಿ ಗ್ಲೋಬಲ್ ಸಂಸ್ಥೆಗಳಿಗೆ ಖಾದಿ ಮತ್ತು ಗ್ರಾಮ ಕೈಗಾರಿಗಳ ಆಯೋಗ( ಕೆವಿಐಸಿ) ಲೀಗಲ್ ನೋಟೀಸ್ ಜಾರಿ ಮಾಡಿದೆ. ಖಾದಿ ಬ್ರಾಂಡ್ ಹೆಸರನ್ನು ಬಳಸಿಕೊಂಡು, ವಿವಿಧ ಇ-ಕಾಮರ್ಸ್ ವೇದಿಕೆಗಳ ಮೂಲಕ ಸೌಂದರ್ಯವರ್ಧಕ ಮತ್ತು ಸೌಂದರ್ಯ ಉತ್ಪನ್ನಗಳು ಮಾರಾಟ ಮಾಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ ಎಂದು ಕೆವಿಐಸಿ ಹೇಳಿಕೆಯಲ್ಲಿ ತಿಳಿಸಿದೆ.
ಖಾದಿ ಎಸೆನ್ಷಿಯಲ್ಸ್ ಹಾಗೂ ಖಾದಿ ಗ್ಲೋಬಲ್ ಸಂಸ್ಥೆಗಳಿಗೆ ಈ ತಿಂಗಳ ಆರಂಭದಲ್ಲಿ ನೋಟೀಸ್ ಜಾರಿ ಮಾಡಿ ‘ಖಾದಿ’ ಬ್ರಾಂಡ್ ಹೆಸರು ಬಳಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರಾಯೋಜನೆ ನಿಲ್ಲಿಸಬೇಕು ಎಂದು ಕೆವಿಐಸಿ ಸೂಚಿಸಿತ್ತು. ಖಾದಿ ಎಸೆನ್ಷಿಯಲ್ಸ್ ಡಾಟ್ ಕಾಂ ಹಾಗೂ ಖಾದಿ ಗ್ಲೋಬಲ್ ಡಾಟ್ ಕಾಮ್ ಡೊಮೈನ್ ಹೆಸರಗಳನ್ನು ರದ್ದುಪಡಿಸುವಂತೆ ತಾಕೀತು ಮಾಡಿತ್ತು. ಅಲ್ಲದೆ, ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಖಾದಿ ಸಂಸ್ಥೆಗಳಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಖಾದಿ ಟ್ರೇಡ್ ಮಾರ್ಕ್ ಹಾಗೂ ಅದರ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದೆ. “ಖಾದಿ ಇಂಡಿಯಾ” ಹಾಗೂ ಟ್ರೇಡ್ ಮಾರ್ಕ್ “ಖಾದಿ” ಯನ್ನು ತನ್ನ ಅಧಿಕೃತ ಪರವಾನಗಿ ಹೊಂದಿರುವವರು ಮಾತ್ರ ಬಳಸಬೇಕು. ನಿಗದಿತ ಅವಧಿಯಲ್ಲಿ ತನ್ನ ಸೂಚನೆಗಳನ್ನು ಪಾಲಿಸದಿದ್ದರೆ ಈ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.