ಶಿಗ್ಗಾವ್

ಸ.ಪ್ರೌ.ಶಾಲೆ ನೀರಲಗಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಸ.ಪ್ರೌ.ಶಾಲೆ ನೀರಲಗಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಶಿಗ್ಗಾವಿ 09: ತಾಲೂಕಿನ ಸ.ಪ್ರೌ.ಶಾಲೆ ನೀರಲಗಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಿ, ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಲಾಯಿತು, ಹಾಗೂ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ, ರಸ್ತೆ ಸುರಕ್ಷತಾ ನಿಯಮಗಳು, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಮತ್ತು ಬಾಲಕಾರ್ಮಿಕ ಪದ್ಧತಿ ಮತ್ತು ಶಿಕ್ಷಣ ಹಕ್ಕು ಕಾಯ್ದೆ ವಿಷಯಗಳ ಕುರಿತಾದ ಕಾನೂನಿನ ನಿಯಮಗಳು ಮತ್ತುಅದರ ಸಧ್ಬಳಕೆಯ ಕುರಿತಾದ ಮಾಹಿತಿಯನ್ನು ಹಿರಿಯ ಶಿಕ್ಷಕ ಗುರುರಾಜ ಹುಚ್ಚಣ್ಣನವರಒದಗಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಮಹದೇವಯ್ಯ ಟಿ ಆರ್, ಜಗದೀಶ ಹುಲ್ಲೂರ,  ಬಿ ಬಿ ರಡ್ಡೇರ, ಎಸ್ ಐ ಮಡಿವಾಳರ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ನೋಡಲ್ ಅಧಿಕಾರಿ ಎಸ್‌.ಐ. ಮಡಿವಾಳರ ನಿರೂಪಿಸಿದರು. ಅತಿಥಿ ಶಿಕ್ಷಕ ಮಾಲತೇಶ ಮಡಿವಾಳರ ವಂದಿಸಿದರು. ಕಾನೂನು ಅರಿವು ಕಾರ್ಯಕ್ರಮದ ಉಪಯೋಗವನ್ನು 120 ವಿದ್ಯಾರ್ಥಿಗಳು ಪಡೆದರು. 


ಸುದ್ದಿ ಓದಿ