ಕಾನೂನು ಸೇವಾ ಸಮಿತಿ ಅರಿವು ನೆರವು ಅಭಿಯಾನ
ಲೋಕದರ್ಶನ ವರದಿ
ರಾಣೇಬೆನ್ನೂರು 26: ತಾಲೂಕಿನ ಅಸುಂಡಿ ಗ್ರಾಮದ ಪಂಚಾಯತ ಆವರಣದಲ್ಲಿ ಇತ್ತೀಚಿಗೆ ಆಜಾದಿ ಕಾ ಅಮೃತ ಮಹೋತ್ಸವ 75ನೇ ವರ್ಷಾಚರಣೆ ನಿಮಿತ್ತವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 2015 ರ ಅನುಷ್ಠಾನದಡಿಯಲ್ಲಿ ರಾಜ್ಯ ಕಾನೂನು ಪ್ರಾದಿಕಾರವು ಜಿಲ್ಲಾ ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯು , ಜಿ.ಪಂ. ತಾ.ಪಂ, ಗ್ರಾ.ಪಂ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗ್ರಾಮೀಣ ನಾಗರೀಕರಿಗೆ ಉಚಿತ ಕಾನೂನು ಅರಿವು ನೆರವು ಜನ ಜಾಗೃತಿ ಅಭಿಯಾನವು ಆಯೋಜಿಸಿತ್ತು.
ಮನೆ ಮನೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಅರಿವು ಜಾಗೃತಿ ಮಾಹಿತಿ ಹೂತ್ತ, ಪ್ರಾಧಿಕಾರವು ಹೂರ ತಂದ ಸಮಗ್ರ ಕಾನೂನು ಮಾಹಿತಿವುಳ್ಳ ಕೈಪಿಡಿಯನ್ನು ವಿತರಿಸಿ ಮಾತನಾಡಿದ ನ್ಯಾಯವಾದಿ ಪರಮೇಶ ಬಿ. ಗೂಡ್ಡೇಮ್ಮಿ ಅವರು ಗ್ರಾಮೀಣ ನಾಗರೀಕರಿಗೆ ಮನ ಮುಟ್ಟುವ ರೀತಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಹೂರ ತಂದಿರುವ ಕೈಪಿಡಿ ಅತ್ಯಂತ ಉಪಯುಕ್ತವಾಗಿದೆ. ಇದರಿಂದ ಜನ ಸಾಮಾನ್ಯರು ಕಾನೂನಿನ ಬಗ್ಗೆ ಇರುವ ಮಾಹಿತಿ ಮತ್ತು ನಾಗರೀಕ ಕರ್ತವ್ಯಗಳ ಬಗ್ಗೆ ಅರಿತುಕೂಳ್ಳ ಬಹುದಾಗಿದೆ ಎಂದ ಅವರು ತಾಲೂಕು ಕಾನೂನು ಸೇವಾ ಸಮಿತಿ ಮನೆ ಬಾಗಿಲಿಗೆ ಬಂದಿರುವುದು ನಾಗರೀಕರ ಅದೃಷ್ಟವೆಂದು ಭಾವಿಸಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಸಣ್ಣ ನೀಲಪ್ಪನವರ ಅವರು ಅರಿವು ನೆರವು ಶಿಭಿರ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ, ವಕೀಲರಾದ ಉಮೇಶ ಕೂನಬೇವ, ಎಂ.ಬಿ. ಜಾಡರ, ಶ್ರೀಮತಿ ಸರಸ್ವತಿ ಕಮದೂಡ, ವಿ.ಎಂ.ಸಂದ್ಯಾಳ, ಪಿಡಿಓ ಪಿ.ಎಲ್ ನಾಯಕ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಮುಖಂಡರು ಗಣ್ಯರು ಕಾನೂನು ಸೇವಾ ಸಮಿತಿಯ ಸದಸ್ಯರು ಪಾಲ್ಗೂಂಡಿದ್ದರು. ಶಿಭಿರದಲ್ಲಿ ನ್ಯಾಯಾಲಯದ ನ್ಯಾಯವಾದಿಗಳು ವಿವಿಧ ವಿಷಯಗಳ ಕುರಿತಂತೆ ವಿಶೇಷ ಉಪನ್ಯಾಸ ನೀಡುವುದರ ಮೂಲಕ ಪ್ರಾಧಿಕಾರ ಆಭಿಯಾನದ ಉದ್ಧೇಶಿಯ ಯೋಜನೆಯನ್ನು ಮನ ಮುಟ್ಟಿಸುವಲ್ಲಿ ಯಶಸ್ವಿ ಕಂಡರು.