ಕಾನೂನು ಅರಿವು ನೆರವು ಸಮಾರೋಪ ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಕನಿಷ್ಠ ಜ್ಞಾನ ಅಗತ್ಯ
ರಾಣೆಬೆನ್ನೂರು 13: ಭಾರತೀಯ ನೆಲದ ಕಾನೂನು ಅತ್ಯಂತ ಸುಭದ್ರವಾಗಿದೆ ಜನಸಾಮಾನ್ಯರಿಗೂ ಕಾನೂನಿನ ಕನಿಷ್ಠ ಜ್ಞಾನದ ಅರಿವು ಇರಬೇಕೆನ್ನುವ ಉದ್ದೇಶದಿಂದ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಜಾರಿಗೆ ತಂದಿರುವ ಉಚಿತ ಕಾನೂನು ಅರಿವು ನೆರವು ಶಿಬಿರಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ನ್ಯಾಯಾಧೀಶೆ, ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ವಾಯ್.ಎಲ್.ಲಾಡಖಾನ ಹೇಳಿದರು. ಅವರು ರವಿವಾರ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲೂಕ ಆಡಳಿತ, ತಾ. ಪಂ, ಶಿಕ್ಷಣ, ಆರೋಗ್ಯ, ನಗರ ಸಭೆ, ಪೋಲಿಸ ಇಲಾಖೆ ಸೇರಿದಂತೆ ಮತ್ತಿತರೆ ಸಂಘಟನೆಗಳು ಆಯೋಜಿಸಿದ್ದ ಆಜಾದಿಕಾ ಅಮೃತ ಮಹೋತ್ಸವ, ಕಾನೂನು ಅರಿವು ನೆರವು ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ 31 ರಿಂದ ನಡೆದ ಕಾನೂನು ಅರಿವು ನೆರವು ಶಿಬಿರಗಳು ಯಶಸ್ವಿಯಾಗಿ ಜರುಗಿ ದ್ದು, ರಾಜ್ಯ ಪ್ರಾಧಿಕಾರದ ಉದ್ದೇಶವು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಿ. ಹೆಚ್. ಬುರಡಿಕಟ್ಟಿ ಅವರು, ವಕೀಲರ ಸಂಘದ ಜೊತೆ ಜೊತೆಗೆ ತಾಲೂಕು ಕಾನೂನು ಸೇವಾ ಸಮಿತಿಯು, ನಗರವು ಸೇರಿದಂತೆ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ನೆರವು ಶಿಬಿರಗಳ ಮೂಲಕ ಕಾನೂನಿನ ಕುರಿತು ನಿರಂತರ ಜಾಗೃತಗೊಳಿಸಲಾಗಿದೆ. ಇದರ ಯಶಸ್ವಿಗೆ ಪ್ರತಿಯೊಂದು ಗ್ರಾಮ ಪಂಚಾಯಿತಿಗಳು, ಸಂಘ,ಸಂಸ್ಥೆಗಳು ಸಹಕಾರ ನೀಡಿವೆ ಎಂದು ತಮ್ಮ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎರಡನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶೆ, ನಿವೇದಿತಾ ಮುನವಳ್ಳಿಮಠ, ಹಿರಿಯ ನ್ಯಾಯವಾದಿಗಳಾದ ಎಂ.ಬಿ ಚಿನ್ನಪ್ಪನವರ್, ಸಿ ಡಿ ಪಿ ಓ ಜಯಶ್ರೀ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಎಚ್ ಪಾಟೀಲ್, ಕುಮಾರ್ ಎಳೇಹೊಳೆ, ಉಪಾಧ್ಯಕ್ಷ ಕುಮಾರ್ ಮಡಿವಾಳರ, ಕಾರ್ಯದರ್ಶಿ ಗಣೇಶ ಮುಂಡಾಸದ, ರಕ್ತ ನಿಧಿ ಕೇಂದ್ರದ ಶ್ರೀಧರ್ ಸೇರಿದಂತೆ ಮತ್ತಿತರ ಗಣ್ಯರು ಪದಾಧಿಕಾರಿಗಳು ಮಹಿಳಾ ವಕೀಲರು ಉಪಸ್ಥಿತರಿದ್ದರು. ಕವಿತಾ ಅಂದಾನೆಪ್ಪನವರ್ ಪ್ರಾರ್ಥಿಸಿದರು, ನ್ಯಾಯವಾದಿ ವಿಠಲ್ ಪುಟಾಣಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಎನ್. ಜೆ. ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನ್ಯಾಯವಾದಿಗಳ ಸಮೋಹವು ಸೇರಿದಂತೆ, 40ಕ್ಕೂ ಹೆಚ್ಚು ನಾಗರಿಕರು, ರಕ್ತ.ದಾನ ನೀಡಿದರು.