ಆಧ್ಯಾತ್ಮಿಕತೆಯತ್ತ ಹೆಚ್ಚಿನ ಒಲವು ಮೂಡಿಸಿಕೊಳ್ಳುವುದರಿಂದ ಶಾಂತಿ- ಸಮಾಧಾನ
ಲೋಕದರ್ಶನ ವರದಿ
ರಾಣಿಬೆನ್ನೂರ 29: ಇಂದಿನ ಯಾಂತ್ರಿಕೃತ ಹಾಗೂ ಆಧುನೀಕರಣದ ಬದುಕಿನ ಜಂಜಾಟದಲ್ಲಿ ನಲುಗುತ್ತಿರುವ ಮನುಜನಿಗೆ ಲೌಕಿಕ ಜೀವನ, ಒತ್ತಡದಿಂದ ಅಲ್ಪವಾದರೂ ಮುಕ್ತಿ ಹೊಂದಬೇಕಾದರೆ ಆಧ್ಯಾತ್ಮಿಕತೆಯತ್ತ ಹೆಚ್ಚಿನ ಒಲವು ಮೂಡಿಸಿಕೊಳ್ಳುವುದರಿಂದ ಶಾಂತಿ, ಸಮಾಧಾನ, ನೆಮ್ಮದಿಯಿಂದಿರಲು ಸಹಕಾರಿಯಾಗುತ್ತದೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿ ಆನಂತರ ಶ್ರೀಮಠದಿಂದ ನೀಡಲಾದ ಗೋದಾನ ಸ್ವೀಕರಿಸಿ, ಶ್ರೀಮಠದ ಶ್ರೀಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು. ಮನುಜನು ಜೀವನದುದ್ದಕ್ಕೂ ಹಣ ಮಾಡುವ ಆಸೆಗಾಗಿ ಯಂತ್ರದಂತೆ ದುಡಿಯುತ್ತಾನೆ, ಕೊನೆಗೆ ದುಡಿದ ಹಣದಲ್ಲಿ ಜೀವನ ಸವೆಸಲು ಮುಂದಾದಾಗ ಆತನ ಆಯುಷ್ಯವೇ ಮುಗಿದು ಹೋಗುತ್ತದೆ ಎಂದರು.
ಶ್ರೀಮಠದ ಆವರಣದಲ್ಲಿ 9ನೇ ವರ್ಷದ ಶನೈಶ್ಚರ ಸ್ವಾಮಿಯ ವಾಷರ್ಿಕೋತ್ಸವದ ಅಂಗವಾಗಿ ಶ್ರೀಮಠದ ಶಿವಯೋಗಿ ಸ್ವಾಮಿಗಳು ಲೋಕ ಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ಸಂಕಲ್ಪ ಮಾಡಿ ಮುನ್ನಡೆಸಿಕೊಂಡ ಬಂದ ವೈವಿಧ್ಯಮಯ ಪೂಜಾ ಹಾಗೂ ಧಾಮರ್ಿಕ ಮತ್ತಿತರ ಕಾರ್ಯಕ್ರಮಗಳು ಇತಿಹಾಸದ ಪುಟಗಳನ್ನು ಸೇರಿರುವುದು ಶ್ಲಾಘನೀಯವಾಗಿದೆ ಎಂದರು.
ಶ್ರೀಮಠದಲ್ಲಿ ವರ್ಷದುದ್ದಕ್ಕೂ ನಿರಂತರವಾಗಿ ನಡೆದ ಹೋಮ, ಕೋಟಿ ಜಪ, ದೀಪದುಗರ್ಾ, 16 ಲಕ್ಷ ಮೃತ್ಯುಂಜಯ ಜಪ, ಪೂಜಾ, ಧಾಮರ್ಿಕ ಕಾರ್ಯಗಳಿಂದ ಜನರ ಆಯುಷ್ಯ, ಆರೋಗ್ಯ ವೃದ್ದಿಯಾಗಿ ಸರ್ವರಿಗೂ ಈ ಫಲ ತಲುಪಿರಬಹುದು, ಶ್ರೀಗಳ ಸಂಕಲ್ಪದಂತೆ ಬಹುತೇಕ ಎಲ್ಲ ಕಾರ್ಯಗಳು ಸುಲಲಿತವಾಗಿ ನಡೆದು ಮಂಗಳವಾಗಿರುವುದು ನಮಗೆ ಬಹಳಷ್ಟು ಸಂತಸ ಮೂಡಿಸಿದೆ. ಈ ಕಾರ್ಯಕ್ರಮಕ್ಕೆ ಕಾರಣಾಂತರದಿಂದ ಬರಲಾಗಲಿಲ್ಲವಾದರೂ ಸಹ ಇದೀಗ ಶ್ರೀಮಠಕ್ಕೆ ಆಗಮಿಸಿ ಶ್ರೀಗಳಿಗೆ ಮನಸಾರೆ ಆಶೀರ್ವದಿಸಿರುವೆ ಎಂದು ಕಾಶಿ ಸ್ವಾಮಿಗಳು ಹೇಳಿದರು.
ಶನೈಶ್ಚರ ಮಂದಿರದ ಶಿವಯೋಗಿ ಶಿವಚಾರ್ಯ ಮಹಾಸ್ವಾಮಿಗಳು ಮಾತನಾಡಿ 393 ದಿನಗಳ ಕಾಲ ನಿರಂತರವಾಗಿ ನಡೆದ ಈ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸಮಸ್ತ ಭಕ್ತರ ಹಾಗೂ ಸಮಿತಿಯವರ ಸಹಾಯ ಸಹಕಾರವೇ ಕಾರಣವಾಗಿದೆ, ಅವರುಗಳಿಗೆ ಅನಂತ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ಶ್ರೀಗಳು ವಿವರಿಸಿದರಲ್ಲದೇ ಮುಂಬರುವ ದಿನಮಾನಗಳಲ್ಲಿ 1 ಲಕ್ಷ ಮಹಿಳೆಯರನ್ನು ಸೇರಿಸುವ ಮೂಲಕ ಬೃಹತ್ ಕಾರ್ಯಕ್ರಮ ಮಾಡುವ ಯೋಜನೆ ಇದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಎಸ್ಎಸ್ ರಾಮಲಿಂಗಣ್ಣನವರ ಸೇರಿದಂತೆ ಸಮಿತಿಯ ಸದಸ್ಯರುಗಳು, ಶಾಸ್ರ್ತೀಗಳು, ಪಾಠಶಾಲೆಯ ವಟುಗಳು, ಭಕ್ತರು ಮತ್ತಿತರರು ಇದ್ದರು. ಇದಕ್ಕೂ ಮುನ್ನ ಕಾಶಿ ಪೀಠದ ನಿಯೋಜಿತ ಉತ್ತರಾಧಿಕಾರಿ ಡಾ. ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠಕ್ಕೆ ಬೇಟಿ ನೀಡಿ ಶ್ರೀಗಳ ಕಾರ್ಯ ಶ್ಲಾಘಿಸಿದರು