ಸತತ ಮಳೆ, ಬೆಳೆ ಹಾನಿ ಏಕರೆಗೆ 50 ಸಾವಿರ ಪರಿಹಾರಕ್ಕೆ ಮುಖಂಡರ ಆಗ್ರಹ
ರಾಣೇಬೆನ್ನೂರು 28: ತಾಲೂಕಿನಲ್ಲಿ ನಿರಂತರ ಮಳೆ ಸುರಿದು ಬೆಳೆದ ಫಸಲು ಹಾಳಾಗಿ ರೈತರು ಅಪಾರ ಪ್ರಮಾಣದಲ್ಲಿ ನಷ್ಟಕ್ಕೂಳಗಾಗಿದ್ದಾರೆ. ಕೊಡಲೇ ಸರ್ಕಾರ ಹಾನಿಗೂಂಡ ಪ್ರತಿಯೊಬ್ಬ ರೈತರಿಗೂ ಪ್ರತಿ ಎಕ್ಕರೆಗೆ 50 ಸಾವಿರ ರೂಪಾಯಿ ಪರಿಹಾರ ವಿತರಿಸಲು ಕ್ರಮ ಕೈಗೂಳ್ಳುವಂತೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಅವರು ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಶುಕ್ರವಾರ ಅವರು ರೈತರೂಂದಿಗೆ ತಹಶೀಲ್ದಾರ ಕಛೆರಿಗೆ ತೆರಳಿ ತಹಶೀಲ್ದಾರ ಶಂಕರ್ ಜಿ.ಎಸ್ ಅವರ ಮೂಲಕ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ರೈತರ ಬೆಳೆಗಳು ಮಳೆಯಿಂದ ನೀರು ಪಾಲಾಗಿವೆ, ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸ್ವೀಕರಿಸುವ ಅವಧಿಯನ್ನು ಸಂಕಷ್ಟದಲ್ಲಿರುವ ರೈತನ ಹಿತ ದೃಷ್ಟಿಯಿಂದ ಡಿಸೆಂಬರ 15 ರವರೆಗೆ ವಿಸ್ತರಿಸುವಂತೆ ಸಲ್ಲಿಸಿರುವ ಮನವಿಯಲ್ಲಿ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಪ್ರತಿ ಎಕ್ಕರೆಗೆ 50 ಸಾವಿರ ರೂ ಗಳನ್ನು ಈಗಿನ ಮಾರುಕಟ್ಟೆಯ ವೈಜ್ಞಾನಿಕ ದರದ ರೂಪದಲ್ಲಿ ಬೆಳೆ ಪರಿಹಾರವಾಗಿ ನೀಡಬೇಕು ಹಿಂದಿನ ಮುಖ್ಯ ಮಂತ್ರಿಗಳು ಅಧಿಕಾರದಿಂದ ಇಳಿಯುವ ಸಮಯದಲ್ಲಿ ಈಗಿನಂತೆ ಮಳೆಯಿಂದ ಹಾನಿಗೂಂಡ ಬೆಳೆ ಪರಿಹಾರವಾಗಿ ಪ್ರತಿ ಎಕ್ಕರೆಗೆ 10 ಸಾವಿರ ರೂಪಾಯಿ ಘೋಷಿಸಿದ್ದರು. ಆದರೆ ಆ ಪರಿಹಾರವನ್ನು ರೈತರಿಗೆ ವಿತರಿಸದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಹೀಗಾಗಿ ಆ 10 ಸಾವಿರ ಜೊತೆಗೆ ಈಗ 50 ಸಾವಿರ ರೂಗಳನ್ನು ಪ್ರತಿ ಎಕರೆಗೆ ನೀಡುವ ಮೂಲಕ ರೈತರ ನೆರವಿಗೆ ಸ್ಪಂದಿಸಬೇಕು ಎಂದಿದ್ದಾರೆ.
ರೈತರು ಸರ್ಕಾರಕ್ಕೆ ದಾಖಲಾತಿಗಳನ್ನು ತಕ್ಷಣ ಪೂರೈಸಲು ಸಾಧ್ಯವಿಲ್ಲ ಹೀಗಾಗಿ ಸಮಯದ ಅವಕಾಶ ನೀಡಬೇಕು ಸರ್ಕಾರ ಪರಿಹಾರಕ್ಕಾಗಿ ಕೇವಲ ಹೂಲದಲ್ಲಿ ನಿಂತ ಬೆಳೆಗಳನ್ನು ಮಾತ್ರ ನಷ್ಟ ಹೂಂದಿದ ಬೆಳೆ ಎಂದು ಪರಿಗಣಿಸುತ್ತಿದ್ದು ಇದು ಅವೈಜ್ಞಾನಿಕ ನೀತಿಯಾಗಿದೆ. ರೈತರು ತಮ್ಮ ಫಸಲನ್ನು ಕೂಯ್ದು ತಮ್ಮ ತಮ್ಮ ಕಣ ಮತ್ತು ಹೂಲದಲ್ಲಿ ರಾಶಿ ಮಾಡಿಟ್ಟುಕೂಂಡಾಗ ಅಕಾಲಿಕವಾಗಿ ಸುರಿದ ಮಳೆಯಿಂದ ಕೂಡಿಟ್ಟ ರಾಶಿಯ ಫಲ ಕೊಳೆತು ಮೊಳಕೆ ಒಡೆದಿದ್ದರೆ, ಕೆಲವೂಂದು ರಾಶಿಗಳು ರಭಸದ ನೀರಿಗೆ ತೇಲಿ ಹೂಗಿವೆ. ಇವುಗಳನ್ನು ಸಹ ಕಂದಾಯ ಇಲಾಖೆ ಮುಖಾಂತರ ಸರ್ವೆ ಕಾರ್ಯ ಮಾಡಿಸಿ ಅವರಿಗೂ ಯೋಗ್ಯ ಪರಿಹಾರ ವಿತರಿಸಬೇಕೆಂದು ಪಾಟೀಲ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುಂಚೂಣಿಯಲ್ಲಿ ಮುಖಂಡರಾದ ವೀರನಗೌಡ ಪೋಲೀಸ್ಗೌಡ್ರ, ಪ್ರಭುಸ್ವಾಮಿ ಕರ್ಜಗಿಮಠ, ಚಂದ್ರ್ಪ ಬೇಡರ, ಬಸವರಾಜ ಕೊಂಗಿ, ಗದಿಗೆಪ್ಪ ಹೂಸಳ್ಳಿ, ಹರಿಹರಗೌಡ ಪಾಟೀಲ, ಇಕ್ಬಾಲ್ಸಾಬ ರಾಣೇಬೆನ್ನೂರ, ಜಗದೀಶ ಕೆರೂಡಿ, ಶಿವಪ್ಪ ಬಡಕರಿಯಪ್ಪನವರ, ಪ್ರದೀಪ್ ಅಕ್ಕೇರ, ಸೇರಿದಂತೆ ಮತ್ತಿತರ ರೈತರು ಸಂಘಟನೆಯ ಮುಖಂಡರು ಪಾಲ್ಗೂಂಡಿದ್ದರು.