ಶ್ರೀನಿವಾಸ ಮಾನೆಗೆ ಅಭಿನಂದನೆ ಸಲ್ಲಿಸಿದ ಮುಖಂಡರು
ಲೋಕದರ್ಶನ ವರದಿ
ಶಿಗ್ಗಾವಿ 01: ಹಾನಗಲ್ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಯುವಕರ ಕಣ್ಮಣಿ ಸದಾ ಜನ ಕಲ್ಯಾಣ ಬಯಸುವ ಯುವ ನೇತಾರರಾಗಿರುವ ಶ್ರೀನಿವಾಸ ಮಾನೆ ಅವರನ್ನು ಶಿಗ್ಗಾವ್ ತಾಲೂಕ ಕಾಂಗ್ರೆಸ್ ಪಕ್ಷದ ವಕ್ತಾರ್ ಹಾಗೂ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ್ ಕೆಪಿಸಿಸಿ ಸಂಯೋಜಕ ಯಾಶಿರ್ಖಾನ್ ಪಠಾಣ ಅವರ ಜೊತೆ ಪಟ್ಟಣದಲ್ಲಿ ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು ಜೊತೆಗೆ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ನಿಸಾರ್ ಅಹಮದ್ ತೋಕಲ್ಲಿ ಇನ್ನು ಹಲವರು ಉಪಸ್ಥಿತರಿದ್ದರು ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಮತದಾರರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಪಕ್ಷದ ಮುಖಂಡ ಪದಾಧಿಕಾರಿ ಕಾರ್ಯಕರ್ತ ನಿರ್ವಹಿಸಬೇಕೆಂದು ಸಲಹೆ ನೀಡಿದರು ಪಕ್ಷದ ಕಾರ್ಯಕರ್ತರ ನಿಷ್ಠೆ ಪರಿಗಣಿಸಿ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ಹೇಳಿದರು