ಸಿಂಧಗಿ

ವಕೀಲರ ಹತ್ಯೆ, ಹಲ್ಲೆ ಖಂಡಿಸಿ ವಕೀಲರ ಸಂಘದ ಪ್ರತಿಭಟನೆ

ವಕೀಲರ ಹತ್ಯೆ, ಹಲ್ಲೆ ಖಂಡಿಸಿ ವಕೀಲರ ಸಂಘದ ಪ್ರತಿಭಟನೆ

ಸಿಂದಗಿ 12: ವಕೀಲರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಳೆದ ವಾರ ಚಿಕ್ಕಮಗಳೂರು ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕಲಬುರಗಿಯಲ್ಲಿ ವಕೀಲರೊಬ್ಬರ ಕೊಲೆಯಾಗಿದೆ. ಸರ್ಕಾರ ವಕೀಲರ ರಕ್ಷಣೆಗೆ ನಿಲ್ಲಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ. ದೊಡಮನಿ ಒತ್ತಾಯಿಸಿದರು. 

 ತಾಲೂಕು ಆಡಳಿತ ಸೌಧಕ್ಕೆ ಹೋಗಿ ಮನವಿ ಸಲ್ಲಿಸುವ ಮೊದಲು ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲಿ ್ಲ ಮಾನವ ಸರಪಳಿ 

ನಿರ್ಮಿಸಿ ಹತ್ಯೆಗೈದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಾಲೂಕು ಆಡಳಿತ ಸೌಧದವರೆಗೆ ಬೈಕ್ ರಾ​‍್ಯಲಿ ಮೂಲಕ ಪ್ರತಿಭಟನೆ ನಡೆಸಿದರು. ನಂತರ ವಕೀಲರು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಈ ವೇಳೆ ವಕೀಲರಾದ ಅರವಿಂದ ಕನ್ನೂರ, ಆರ್‌.ಡಿ. ಅಮ್ಯಾಗೋಳ, ಜಿ.ಜಿ. ಮಾರ್ಸನಳ್ಳಿ, ಎಸ್‌.ಎ. ಗಾಯಕವಾಡ, ಆರ್‌.ಎಂ. ಶಿರಬೂರ, ಎಂ.ಸಿ. ಯಾತನೂರ, ಎಸ್‌.ಬಿ. ಖಾನಾಪೂರ, ಎಸ್‌.ಎಮ್‌.ಕಾಚೂರ, ಶಶಿಧರ ಗಾಯಕವಾಡ ಸೇರಿದಂತೆ ತಾಲೂಕಿನ ಎಲ್ಲ ವಕೀಲರು ಇದ್ದರು. 


ಸುದ್ದಿ ಓದಿ