ಶಿಗ್ಗಾವ್

ವಿಜಯಬೂತ್ ಅಭಿಯಾನಕ್ಕೆ ಚಾಲನೆ

ವಿಜಯಬೂತ್ ಅಭಿಯಾನಕ್ಕೆ ಚಾಲನೆ

ಶಿಗ್ಗಾವಿ 12:  ತಾಲೂಕಿನ ಬಂಕಾಪೂರ ಬೂತ್‌ನಲ್ಲಿ ವಿಜಯಬೂತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಸವರಾಜ ನಾರಾಯಣಪೂರ ಅವರು ಮನೆ ಮನೆ ಮೇಲೆ ಬಿಜೆಪಿ ಧ್ವಜಾರೋಹಣ ಮಾಡಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ತಿಳಿಸಿ ಅಂತ್ಯೋದಯದ ಪರಿಕಲ್ಪನೆಗೆ ಸಾಕಾರ ನೀಡಿಕೇಂದ್ರದ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದ ಸರಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಿಜೆಪಿ ಆಡಳಿತದಲ್ಲಿ ಜನಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ಯೋಜನೆ ತಲುಪಿಸುವಲ್ಲಿ ಯಶಸ್ವಿ ಪಾತ್ರವಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಕಿರಣ ಸಕ್ರಿ, ವಿಲಾಸ ನಾರಾಯಣಪೂರ, ಈರಣ್ಣಾ ಕೊತಂಬರಿ, ಅಣ್ಣಪ್ಪ ಗುಡಿಮನಿ, ಸಿದ್ದು ಸವಣೂರ, ಬಸವರಾಜ ಆಲದಕಟ್ಟಿ, ಗಂಗಾಧರ ಕೊತಂಬರಿ, ಗದಿಗೆಪ್ಪ ಪಾಟೀಲ, ಶಿವು ಮಡಿವಾಳರ, ಚಂದ್ರು ಮಗ್ಗದ ಸೇರಿದಂತೆ ಗುರುಹಿರಿಯರು ಯುವಕರು  ಪಾಲ್ಗೊಂಡಿದ್ದರು. 


ಸುದ್ದಿ ಓದಿ