ಈ ತಿಂಗಳು ಬಿಡುಗಡೆಯಾಗ್ತಿರೋ ಕನ್ನಡ ಸಿನಿಮಾಗಳು....
ಬೆಂಗಳೂರು, ನ. 08: ಥಿಯೇಟರ್ ಗಳಿಗೇ ಹೋಗಿ ಸಿನಿಮಾ ವೀಕ್ಷಿಸಬೇಕು ಎಂದು ಬಯಸುವ ಪ್ರೇಕ್ಷಕರು ಈ ತಿಂಗಳು ಹಲವು ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇದೇ 12ರಂದು ಟಾಮ್ ಅಂಡ್ ಜೆರ್ರಿ, ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ, ಹಿಟ್ಲರ್, ಬೈ 1 ಗೆಟ್ 1 ಫ್ರೀ, ಕಪೋ ಕಲ್ಪಿತಂ, ಯರ್ರಾಬಿರ್ರಿ ತೆರೆ ಕಾಣಲಿವೆ.
ನವೆಂಬರ್ 18ರಂದು ಲಕ್ಷ್ಯ, 19ರಂದು ಒಂಬತ್ತನೇ ದಿಕ್ಕು, ಗರುಡ ಗಮನ ವೃಷಭ ವಾಹನ, ರಮೇಶ್ ಅರವಿಂದ್ ನಟನೆ, ನಿರ್ದೇಶನದ 100, ನಟ ರವಿಚಂದ್ರನ್ ಪುತ್ರ ಮುಗಿಲ್ ಪೇಟೆ, ಸ್ನೇಹಿತ, ನನ್ನ ಹೆಸರು ಕಿಶೋರ ಚಿತ್ರಗಳು ಬಿಡುಗಡೆಯಾಗುತ್ತಿವೆ.
ನವೆಂಬರ್ 26ರಂದು ಸಖತ್, ಅಮೃತಾ ಅಪಾರ್ಟ್ ಮೆಂಟ್ಸ್, ಗೋವಿಂದ ಗೋವಿಂದ ಸಿನಿಮಾಗಳು ಥಿಯೇಟರ್ ಗೆ ಲಗ್ಗೆಯಿಡುತ್ತವೆ.
ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸುವ ಮೂಲಕ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.