ಸಂಕೇಶ್ವರ

ದಿ. ಉಮೇಶ ಕತ್ತಿ ಪುಣ್ಯಸ್ಮರಣೆ: ಉಚಿತ ಕಣ್ಣಿನ ಶಿಬಿರ

ದಿ. ಉಮೇಶ ಕತ್ತಿ ಪುಣ್ಯಸ್ಮರಣೆ: ಉಚಿತ ಕಣ್ಣಿನ ಶಿಬಿರ

ಸಂಕೇಶ್ವರ 10: ಉತ್ತರ ಕರ್ನಾಟಕದ ಸುಪ್ರಸಿದ್ಧ ಎಂ.ಎಂ. ಜೋಶಿ, ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ದಿವಂಗತ ಉಮೇಶ ವಿಶ್ವನಾಥ ಕತ್ತಿ ಇವರ ಪ್ರಥಮ ಪುಣ್ಯಸ್ಮರಣೆಯ ಸ್ಮರಣಾರ್ಥಕವಾಗಿ ಪವನ ರಮೇಶ ಕತ್ತಿ ಅವರು ಆಯೋಜಿಸಿದ್ದ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರಕ್ಕೆ ನಿಡಸೋಶಿ ಶಿವಲಿಂಗೇಶ್ವರ ಶ್ರೀಗಳು ಹಾಗೂ ಅವರ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀಗಳು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಚಾಲನೆ ನೀಡಿದರು. 

 25 ಗ್ರಾಮಗಳಿಂದ ಪುರುಷರು ಹಾಗೂ ಮಹಿಳೆಯರಿಗೆ ಒಳಗೊಂಡು ಸುಮಾರು 108 ಜನರಿಗೆ ಸಂಕೇಶ್ವರದ ಮುರಗುಡೆ ಆಸ್ಪತ್ರೆಯಲ್ಲಿ ನುರಿತ ತಜ್ಞರಿಂದ ಕಣ್ಣಿನ ಪೊರೆಯ ಶಸ್ತ್ರಕ್ರಿಯೆಯನ್ನು ಮಾಡಲಾಯಿತು. 

 ಕತ್ತಿ ಚಾರಿಟೆಬಲ್ ಸಂಸ್ಥೆಯಿಂದ 470 ಜನರಿಗೆ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು. ಪವನ ರಮೇಶ ಕತ್ತಿ ಅವರು ಉಚಿತವಾಗಿ ಸೆ. 1ರಿಂದ ಗ್ರಾಮೀಣ ಭಾಗಗಳಲ್ಲಿ ನೇತ್ರ ಶಿಬಿರವನ್ನು ಏರ್ಪಡಿಸಿದ್ದರು. ಅದರ ಪ್ರಯುಕ್ತವಾಗಿ ಶಸ್ತ್ರ ಚಿಕಿತ್ಸೆ ಶಿಬಿರವು ಆಸ್ಪತ್ರೆಯಲ್ಲಿ ನಡೆಯಿತು. 


ಸುದ್ದಿ ಓದಿ