ಮನರಂಜನೆ

ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಲತಾ ಮಂಗೇಶ್ಕರ್

ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಲತಾ ಮಂಗೇಶ್ಕರ್

ಮುಂಬೈ : ಜನೆವರಿ 12  ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲತಾ ದೀದಿ ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಂಬಂಧಿ ರಚನಾ ಶಾ ತಿಳಿಸಿದ್ದಾರೆ. ಪ್ರಸ್ತುತ ಲತಾ ಮಂಗೇಶ್ಕರ್ ಅವರು ಆಕ್ಸಿಜನ್ ಕೊಡಲಾಗುತ್ತಿದ್ದು ಐಸಿಯುನಲ್ಲಿ ಇರಿಸಲಾಗಿದೆ ಎಂದರು.

“ಲತಾ ಮಂಗೇಶ್ಕರ್ ಅವರಿಗೆ ವಯೋ ಸಹಜ ಸಮಸ್ಯೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸುವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಲತಾ ಜೀ ಒಬ್ಬ ಹೋರಾಟಗಾರ್ತಿ ಮತ್ತು ವಿಜೇತೆ. ಅವರ ಆರೋಗ್ಯದ ಬಗ್ಗೆ ದೇಶಾದ್ಯಂತ ಎಲ್ಲ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಶೀಘ್ರದಲ್ಲಿ ಕೊರೊನಾದಿಂದ ಗೆದ್ದು ಮನೆಗೆ ಮರಳುತ್ತಾರೆ” ಎಂದು ಲತಾ ಅವರ ಸಂಬಂಧಿ ಮಾಹಿತಿ ನೀಡಿದರು.

ಲತಾ ಮಂಗೇಶ್ಕರ್ ಚೇತರಿಸಿಕೊಳ್ಳುತ್ತಿದ್ದರೂ ಅವರ ಭೇಟಿಗೆ ಕುಟುಂಬಸ್ಥರಿಗೆ ವೈದ್ಯರು ಅವಕಾಶ ನೀಡುತ್ತಿಲ್ಲ. ಕೊರೊನಾ ಹಾಗೂ ನ್ಯೂಮೋನಿಯಾದಿಂದ ಗಾಯಕಿ ಬಳಲುತ್ತಿದ್ದು, ಇನ್ನು 10 ರಿಂದ 12 ದಿನಗಳ ಕಾಲ ಐಸಿಯುನಲ್ಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.

92 ವರ್ಷದ ಲತಾ ಮಂಗೇಶ್ಕರ್ ಅವರನ್ನು 2 ವರ್ಷಗಳ ಹಿಂದೆ ಉಸಿರಾಟದ ತೊಂದರೆ ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ 28 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಸುದ್ದಿ ಓದಿ