ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪೂಜಾರ ಭೂಮಿಪೂಜೆ
ರಾಣಿಬೆನ್ನೂರ 27: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೋವಿಡ್ ಸಂಕಷ್ಠದ ಸಂದರ್ಭದಲ್ಲಿಯೂ ಸಾಕಷ್ಟು ಅಭಿವೃದ್ಧಿಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಶನಿವಾರ ತಾಲೂಕಿನ ಮಾಕನೂರ ಗ್ರಾಮದ ಆಶ್ರಯ ಬಡಾವಣೆಯಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾದ ಗ್ರಾಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತು ಚರಂಡಿ ಕಾಮಾಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಬಹುತೇಕ ಕಾಮಗಾರಿಗಳು ಮುಕ್ತಾಯಗೊಂಡಿವೆ. ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಕೆಲವು ಮಂಜೂರಾತಿಯ ಹಂತದಲ್ಲಿದ್ದು, ನಾಗರೀಕರು ಸಹ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕಳೆದ 2 ವರ್ಷಗಳಲ್ಲಿ ರಾಜ್ಯಸರ್ಕಾರವು ಕೋವಿಡ್ ಅನ್ನು ಸಮರ್ಕವಾಗಿ ಎದುರಿಸಿವೆ. ಹೆಚ್ಚಿನ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕಾಗಿ ಮತ್ತು ಜನರ ಸುರಕ್ಷತೆಗಾಗಿ ವ್ಯಯ ಮಾಡಿದೆ. ದೇಶದಲ್ಲಿಯೇ ಕೋವಿಡ್ ನಿಯಂತ್ರಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೂ ಸಹ ಅಭಿವೃದ್ಧಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದರು.
ವಿಪ ಸದಸ್ಯ ಆರ್.ಶಂಕರ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಪಂ ಅಧ್ಯಕ್ಷೆ ಸೋಮಕ್ಕ ಹಲಗೇರಿ, ಉಪಾಧ್ಯಕ್ಷ ದೇವೇಂದ್ರ್ಪ ಎಲಜಿ, ಸದಸ್ಯರಾದ ಶಿವನಗೌಡ ನಂದಿಗಾವಿ, ಶೋಭಾ ಬಾರ್ಕಿ, ಬಸಮ್ಮ ಪೂಜಾರ, ಸಿದ್ದಮ್ಮ ಕುರುಬರ, ಹನುಮಂತಗೌಡ ದೊಡ್ಡಗೌಡ್ರ, ಡಾಽ ಮಾಂತೇಶ ಹುಚ್ಚಣ್ಣನವರ, ನಾಗಮ್ಮ ಸಾರಥಿ, ಮಲ್ಲೇಶಪ್ಪ ಹಲಗೇರಿ, ಸುಮಿತ್ರಾ ಚಿನ್ನಣ್ಣನವರ, ದುರ್ಗವ್ವ ಬಡಣ್ಣನವರ, ಕೆಂಚನಗೌಡ ಮುದಿಗೌಡ್ರ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪವನಕುಮಾರ ಮಲ್ಲಾಡದ, ತಾಲೂಕಾಧ್ಯಕ್ಷ ವಿನಯಕುಮಾರ ಮಲ್ಲನಗೌಡ್ರ, ಶ್ರೀನಿವಾಸ ಆಲದರ್ತಿ, ರಾಮಪ್ಪ ಬಜಾರಿ, ಸಿಡಿಪಿಓ ಜಯಶ್ರೀ ಪಾಟೀಲ, ಪಿಡಿಓ ನಾಗರಾಜ ಕೆ.ಪಿ, ಕಾರ್ಯದರ್ಶಿ ಚಂದ್ರಣ್ಣ ಬೇವಿನಮರದ, ಗ್ರಾಮದ ಮುಖಂಡರಾದ ಮಾದೇಗೌಡ ಭರಮಗೌಡ್ರ, ಬಸವರಾಜ ಕುಂಬಾರ, ಚನ್ನಬಸಪ್ಪ ಸೇರಿದಂತೆ ಮತ್ತಿತರರು ಇದ್ದರು.