ಶಿಗ್ಗಾವ್

ಬೊಮ್ಮಾಯಿ ಗೆಲುವಿಗೆ ಕಂಟಕವಾಗುತ್ತದೆ ಲಂಬಾಣಿ ಸಮಾಜ

ಬೊಮ್ಮಾಯಿ ಗೆಲುವಿಗೆ ಕಂಟಕವಾಗುತ್ತದೆ ಲಂಬಾಣಿ ಸಮಾಜ

ಲೋಕದರ್ಶನ ವರದಿ 

ಶಿಗ್ಗಾವಿ 30: ಪ್ರಾರಂಭದ ಹಂತದಲ್ಲಿ ಕುರ್ಚಿಯ ಆಸೆಗಾಗಿ ಎಲ್ಲ ಸಮಾಜದ ಉಡುಪು  ಧರಿಸಿಕೊಂಡು ಏನೋ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಎಲ್ಲ ಸಮಾಜ ಕಣ್ಣಿಗೆ ಮಣ್ಣು ಎರಚಿ ಗೆದ್ದು ಬಂದ ಸಿ.ಎಂ. ಬಸವರಾಜ ಬೊಮ್ಮಾಯಿ ಎಂದು ಬಂಜಾರ್ ಸಮಾಜದ  ಮಹಾತಿಪ್ಪೇಸ್ವಾಮಿ ಹೇಳಿದರು. 

ಪಟ್ಟಣದ ಎ.ಪಿ.ಎಂ.ಸಿಯಲ್ಲಿ ಶ್ರೀಗಳು ಮಾತನಾಡಿ ಮುಖ್ಯಮಂತ್ರಿಗಳ ಕುರ್ಚಿಗೆ ಏರಿದ  ಬಸವರಾಜ್ ಬೊಮ್ಮಾಯಿ ಯವರು ಕಾಮನ್ ಮ್ಯಾನ್ ಎಂದೇ ಕರಿಸಿಕೊಳ್ಳುತ್ತಾ ಬಂದರು.  ಆದರೆ ಲಂಬಾಣಿ ಸಮಾಜಕ್ಕೆ ಮಾಡಿದಂತಹ ಅನ್ಯಾಯವನ್ನು ಇನ್ನು ಕೆಲವೇ ದಿನಗಳಲ್ಲಿ ನಮ್ಮ ಶಕ್ತಿಯನ್ನು ತೋರಿಸುತ್ತೇವೆ ನಮ್ಮ ಸಮಾಜದ ಓಟಿನಿಂದಲೇ ಇವತ್ತು ಮುಖ್ಯಮಂತ್ರಿ ಪಟ್ಟವನ್ನು ಏರಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. 

ತಾಲೂಕ್ ಅಧ್ಯಕ್ಷ ಧ್ಯಾಮಲಪ್ಪ ಮಾತನಾಡಿ ಬಿಜೆಪಿ ಸರ್ಕಾರ ಮಾಡುತ್ತಿರುವದನ್ನು ನೋಡಿದರೆ ಡಾ. ಬಿ .ಆರ್ ಅಂಬೇಡ್ಕರ್ ರವರು ಹಿಂದುಳಿದ ಸಮಾಜಕ್ಕೆ ನೀಡಿದಂತಹ ಸಂವಿಧಾನವನ್ನೇ ತಿದ್ದಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರಗೆ ಹಾಕಿದರು. 

ಮುಖಂಡ ಅರ್ಜಪ್ಪ ಲಮಾಣಿ ಮಾತನಾಡಿ ಸಂವಿಧಾನದಲ್ಲಿ ನೀಡಿದಂತಹ ಲಂಬಾಣಿ ಸಮಾಜದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿರುವುದು ದುರಾಡಳಿತ ವರ್ತನೆ ಅಂತಾನೆ ಹೇಳಬಹುದು ಏಕೆಂದರೆ ತಮ್ಮ  ಸ್ವಾರ್ಥಕ್ಕಾಗಿ ಸಮಾಜ ಸಮಾಜದ ಮಧ್ಯ ಒಡೆದು ಆಳುವ ನೀತಿಯನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. 

  ಹೊಸುರ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿ ಸಿ.ಎಂ. ಬಸವರಾಜ್ ಬೊಮ್ಮಾಯಿ ಅವರೇ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಸಮಾಜಕ್ಕೆ ಮಾಡಿದಂತಹ ಸದಾಶಿವ ಆಯೋಗ ವರದಿಯನ್ನು ತಮ್ಮ ಸರ್ಕಾರ ಹಿಂಪಡೆಯದಿದ್ದರೆ 50 ರಿಂದ 60 ಕ್ಷೇತ್ರಗಳಲ್ಲಿ ಬಿಜೆಪಿ  ಅಭ್ಯರ್ಥಿಗಳನ್ನು ಕೆಡವುತ್ತೇವೆ ಅದೇ ರೀತಿಯಾಗಿ ತಮ್ಮ ಕುರ್ಚಿಗೆ ಕಂಟಕ ಬರುವುದು ಕಟ್ಟಿಟ್ಟ ಬುತ್ತಿಹುಷಾರ್ ಎಂದು ಗುಡುಗಿದರು. 

ಯುವ ಕಾರ್ಯಕರ್ತ ದೇವರಾಜ್ ಲಮಾಣಿ ಮಾತನಾಡಿ  ಮುಖ್ಯಮಂತ್ರಿಗಳು ವರದಿಯನ್ನು ಹಿಂಪಡೆಯದಿದ್ದರೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ಏನೆಂದು ಕೆಲವೇ ದಿನಗಳಲ್ಲಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಬಂಜಾರ ಸಮಾಜದ ತಾಲೂಕಿನ ಸರ್ವಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ