ರಾಣೆಬೆನ್ನೂರ

ಗೋವಾ ಚುನಾವಣೆ ವೀಕ್ಷಕರಾಗಿ ಲಮಾಣಿ ಆಯ್ಕೆ

ಗೋವಾ ಚುನಾವಣೆ ವೀಕ್ಷಕರಾಗಿ ಲಮಾಣಿ ಆಯ್ಕೆ


ಲೋಕದರ್ಶನ ವರದಿ 

ರಾಣೀಬೆನ್ನೂರ 28:  ಗೋವಾ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆ ನಡೆಯುತ್ತಿದ್ದು ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸುವ ಹಾಗೂ ಗೋವಾದ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.  ಗೋವಾದಲ್ಲಿ ಸುಮಾರು 4 ಲಕ್ಷ ಕನ್ನಡಿಗರಿದ್ದು ಅವರ ಮತಗಳನ್ನು ಸೆಳೆಯುವ ದಿಶೆಯಲ್ಲಿ ಪಕ್ಷದ ನೇತಾರ ದಿನೇಶ ಗುಂಡುರಾವ್‌ರವರಿಗೆ ಉಸ್ತುವಾರಿ ವಹಿಸಿದ್ದು ಅವರಿಗೆ ಹಾಗೂ ಪಕ್ಷಕ್ಕೆ ನೆರವು ನೀಡುವ ದಿಶೆಯಲ್ಲಿ ಜಿಲ್ಲೆಯ ಮಾಜಿ ಸಚಿವ ರುದ್ರ​‍್ಪ ಎಂ.ಲಮಾಣಿ ಅವರನ್ನು ವೀಕ್ಷಕರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಆದೇಶ ಹೊರಡಿಸಿದ್ದಾರೆ. 


ಸುದ್ದಿ ಓದಿ