ಸಂಕೇಶ್ವರ

ನಿಡಸೋಸಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆ: ಜನಮನ ಸೆಳೆದ ಎತ್ತು, ಕುದುರೆ ಗಾಡಿ ಶರ್ಯತ್ತುಗಳು : ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಅಮ್ಮಣಗಿಯ ಭೀಮಪ್ಪಾ ಹುದ್ದಾರ, ಕುದುರೆ ಗಾಡಿ ಸ್ಪರ್ಧೆಯಲ್ಲಿ ರಾಕೇಶ ಶಿರಗುಪ್ಪಿ ಪ್ರಥಮ

ನಿಡಸೋಸಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆ: ಜನಮನ ಸೆಳೆದ ಎತ್ತು, ಕುದುರೆ ಗಾಡಿ ಶರ್ಯತ್ತುಗಳು  : ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಅಮ್ಮಣಗಿಯ ಭೀಮಪ್ಪಾ ಹುದ್ದಾರ, ಕುದುರೆ ಗಾಡಿ ಸ್ಪರ್ಧೆಯಲ್ಲಿ ರಾಕೇಶ ಶಿರಗುಪ್ಪಿ ಪ್ರಥಮ

ಲೋಕದರ್ಶನ ವರದಿ 


ಸಂಕೇಶ್ವರ 17: ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಏರಿ​‍್ಡಸಲಾಗಿದ್ದ ಎತ್ತು, ಕುದುರೆ ಗಾಡಿ ಶರ್ಯತ್ತುಗಳು ಜನಮನ ಸೆಳೆದವು.  

ಕೊರೋನ ಪರಿಣಾಮ ಕಳೆದ ಎರಡು ವರ್ಷಗಳಿಂದ ಯಾವುದೇ ಎತ್ತು-ಕುದುರೆ ಗಾಡಿ ಶರ್ಯತ್ತು ನೋಡದೇ ನಿರಾಸೆಯಲ್ಲಿದ್ದ ಜಾನುವಾರು ಪ್ರಿಯರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಜೋಡೆತ್ತಿನ ಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತುಗಳನ್ನು ಮನದುಂಬಿ ವೀಕ್ಷಿಸಿದರು. ಇನ್ನೂ ವಿಶೇಷವೆಂದರೆ ಒಂದು ನಿಮಿಷ ಗಾಡಾ ಗಾಡಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. 

ಒಂದು ಗಾಡಾ ಗಾಡಿ ಸ್ಪರ್ಧೆಗಾಗಿ ನಿಡಸೋಸಿ ಗ್ರಾಮದ ಕರ​‍್ೂರಿ ಹಳ್ಳದ ಬಳಿ ವಿಶೇಷ ಮೈದಾನ ಮಾಡಲಾಗಿತ್ತು. ವಿಶೇಷವಾಗಿ ಪೋಷಿಸಲಾದ ದೈಹಾಢ್ಯತೆ ಹೊಂದಿರುವ ಎತ್ತುಗಳು ಮಾತ್ರ ಈ ಸ್ಪರ್ಧೆಯಲ್ಲಿ ಹೆಚ್ಚಾಗಿ ಭಾಗವಹಿಸುವದರಿಂದ ಈ ಸ್ಪರ್ಧೆ ವಿಶೇಷತೆ ಪಡೆದುಕೊಂಡಿತು. ಅಲ್ಲದೇ ಒಂದು ನಿಮಿಷ ಸಮಯದಲ್ಲಿ ಎತ್ತುಗಳು ಎಷ್ಟು ಅಡಿ ಗಾಡಿ ಎಳೆಯುತ್ತವೆಯೋ ಆ ಅಳತೆ ಆಧರಿಸಿ ವಿಜೇತ ಎತ್ತುಗಳನ್ನು ಆಯ್ಕೆ ಮಾಡಲಾಗುತ್ತದೆ. 

ವಿವಿಧೆಡೆಯಿಂದ ಜಾನುವಾರು : 

ಜೋಡೆತ್ತು ಹಾಗೂ ಕುದುರೆ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಗೋಕಾಕ, ಸವದತ್ತಿ, ರಾಯಬಾಗ, ಚಿಕ್ಕೋಡಿ, ಅಥಣಿ ಭಾಗದಿಂದ ಸೇರಿದಂತೆ ಬಾಗಲಕೋಟ, ಬಿಜಾಪೂರ ಹಾಗೂ ನೆರೆಯ ಮಹಾರಾಷ್ಟ್ರದ ಕೊಲ್ಹಾಪೂರ ಹಾಗೂ ಸಾಂಗಲಿ ಜಿಲ್ಲೆಯಿಂದ ಜಾನುವಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದವು. ಇನ್ನೂ ಜಾನುವಾರು ಪ್ರಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎತ್ತುಗಳ ಸ್ಪರ್ಧೆಗೆ ಪ್ರೋತ್ಸಾಹಿಸಿದರು. 

ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಅಮ್ಮಣಗಿಯ ಭೀಮಪ್ಪಾ ಹುದ್ದಾರ ಪ್ರಥಮ ಸ್ಥಾನ ಪಡೆದುಕೊಂಡರೆ ಹನುಮಂತವಾಡಿಯ  ರಾಜು ಪಾಂಡುರಂಗ ಜಾಧವ ದ್ವಿತೀಯ ಸ್ಥಾನ ಪಡೆದುಕೊಂಡರು. ಮುರಗೋಡದ ರವೀಂದ್ರ ಮಾಂಗಲೆ ತೃತೀಯ ಸ್ಥಾನ ಹಾಗೂ ಸಚೀನ ಪಾಟೀಲ ಹಾಗೂ ಲಕ್ಷ್ಮಣ ಕರದನ್ನವರ ನಾಲ್ಕನೇ ಸ್ಥಾನ ಪಡೆದುಕೊಂಡರು. 

ಕುದುರೆ ಗಾಡಿ ಸ್ಪರ್ಧೆಯಲ್ಲಿ ರಾಕೇಶ ಶಿರಗುಪ್ಪಿ ಪ್ರಥಮ ಸ್ಥಾನ ಪಡೆದುಕೊಂಡರೆ ಓರವಾಡದ ಜಾಫರ ಮುಲ್ಲಾ ದ್ವಿತೀಯ ಸ್ಥಾನ ಪಡೆದುಕೊಂಡರು. ಸಂಕೇಶ್ವರದ ಮಾರುತಿ ಘಸ್ತಿ ತೃತೀಯ ಸ್ಥಾನ ಹಾಗೂ ರವೀಂದ್ರ ಮರಡಿ ನಾಲ್ಕನೇ ಸ್ಥಾನ ಪಡೆದುಕೊಂಡರು. 

ಒಂದು ನಿಮಿಷ ಗಾಡಾ ಗಾಡಿ ಸ್ಪರ್ಧೆಯಲ್ಲಿ 1840 ಅಡಿ ಗಾಡಿ ಎಳೆದ ಮುಧೋಳದ ಲಕ್ಕಮ್ಮದೇವಿ ಎತ್ತುಗಳು  ಪ್ರಥಮ ಸ್ಥಾನ ಪಡೆದುಕೊಂಡರೆ 1740 ಅಡಿ ಎಳೆದ ಕಾಲಕುಂದ್ರಿಯ ಕಲ್ಮೇಶ್ವರ ದ್ವಿತೀಯ ಸ್ಥಾನ ಪಡೆದುಕೊಂಡವು. ಬೆಳಗಾವಿಯ ಮುತಗಾ ತೃತೀಯ ಸ್ಥಾನ ಪಡೆದುಕೊಂಡವು. 

ಈ ಸಂದರ್ಭದಲ್ಲಿ ದುಂಡಪ್ಪಾ ಹೆದ್ದೂರಿ, ಕಲಗೌಡ ನಿಂಗನೂರಿ, ಸಾತಪ್ಪಾ ಕಾರತಗಿ, ಸಂಜಯ ಪಾಟೀಲ, ಶಿವಾನಂದ ಕರೋಶಿ, ರವೀಂದ್ರ ಮೂಡಲಗಿ, ಸಂತೋಷ ಪಾಟೀಲ, ಸುರೇಶ ಕೋಟೆ, ಮಲ್ಲಪ್ಪಾ ತನೋಡಿ, ಗುರುಲಿಂಗ ಸೊಲ್ಲಾಪೂರಿ, ಮಹಾವೀರ ಖಾನಾಪೂರಿ, ಸುಭಾಷ ಪಾಟೀಲ, ರಾಜು ಯರಗಟ್ಟಿ, ರಾಜು ಗಡಕರಿ, ಚಂದ್ರಕಾಂತ ಭೋಸಲೆ, ಉಮೇಶ ಪಾಟೀಲ, ಪ್ರೀತಂ ತನೋಡಿ, ವಿಶಾಲ ಪಾಟೀಲ, ವಿನೋದ ಕವದಿ, ಜಿನೇಂದ್ರ ಖಾನಾಪೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬಾಕ್ಸ: 

ಇತ್ತೀಚಿನ ದಿನಮಾನಗಳಲ್ಲಿ ಮನರಂಜನೆ ಎನ್ನುವುದು ಮೊಬೈಲ್, ಟಿವ್ಹಿಗಳಿಗೆ ಸೀಮಿತವಾಗುತ್ತಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ, ಜಾತ್ರೆ ಯಾವುದಾದರೊಂದು ಕಾರ್ಯಕ್ರಮ ಏರ​‍್ಾಡಾದರೆ ಸಾಕು ಜಾನುವಾರು ಪ್ರಿಯರು ಎತ್ತು, ಕುದುರೆಗಳನ್ನು ಶರ್ಯತ್ತು ಇದ್ದೇ ಇರುತ್ತದೆ. ಜಾನುವಾರು ಸ್ಪರ್ಧೆ ತಪ್ಪಲ್ಲ ಆದರೆ ಶರ್ಯತ್ತಿನ ಗೆಲುವಿಗಾಗಿ ಜಾನುವಾರುಗಳ ಮೇಲೆ ಬಲಪ್ರಯೋಗ ಮಾಡಬಾರದು. 

ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ 


ಸುದ್ದಿ ಓದಿ