ಲಕ್ಷ್ಮೀದೇವಿ ಕಾರ್ತಿಕೋತ್ಸವ ಜನಮನ ಸೋರೆಗೊಂಡ ಸುಗಮ ಸಂಗೀತ
ರಾಣೇಬೆನ್ನೂರು 26: ಇಲ್ಲಿನ ವಾಣಿಜ್ಯ ನಗರದ ಡಾ. ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಸುಣಕಲ್ ಬಿದರಿ ಗ್ರಾಮದ ಆದಿ ಜಾಂಭವ ಸ್ವ ಸಹಾಯ ಮಹಿಳಾ ಸಂಘವು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಕ್ಷ್ಮೀದೇವಿ ಕಾರ್ತಿಕೋತ್ಸವದ ನಿಮಿತ್ತ ನಾಡಿನ ಖ್ಯಾತ ಕಲಾವಿದರಾದ ಮಹಾನಾಯಕ ಕಲಾ ತಂಡದ ಚಿಕ್ಕಪ್ಪ ಡಿ ಚಲವಾದಿ ಮತ್ತು ಹಳೇ ಹೊನ್ನತ್ತಿಯ ಶ್ರೀ ಹೊನ್ನಮ್ಮ ದೇವಿ ಕಲಾ ತಂಡದ ಬಸವರಾಜ ದು ಭಜಂತ್ರಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉದ್ಘಾಟಿಸಿ ಮಾತನಾಡಿದ, ಚಲವಾದಿ ಮಹಾಸಭಾದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಅವರು, ಕಾರ್ತಿಕೋತ್ಸವಗಳು ನವವರ್ಷಕ್ಕೆ ಪಾದಾರೆ್ಣ ಮಾಡುವ ಮೂನ್ಸೂಚನೆ ನೀಡುವ ಬೆಳಕಿನ ಜ್ಯೋತಿಯನ್ನು ಬೆಳಗಿಸುವ ಹಬ್ಬಗಳಾಗಿವೆ. ಇದರ ಪ್ರತೀಕವಾಗಿ ಕಲೆ ಮತ್ತು ಕಲಾವಿದರಿಂದ ವೈವಿದ್ಯಮಯ ಸಾಂಸ್ಕೃತಿ ಚಟುವಟಿಕೆಗಳನ್ನು ಆಯೋಜಿಸಿ ಅದರ ಮೂಲಕ ಪ್ರತಿಯೊಬ್ಬ ಮನುಷ್ಯನು ಮಾನಸಿಕ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳುವ ಪರಂಪರೆಯ ಹಬ್ಬಗಳು ಇವಾಗಿವೆ ಎಂದರು.
ಕಲಾವಿದರು ತಮ್ಮ ಜೀವನದುದ್ದಕ್ಕೂ ಕಲೆಯನ್ನೇ ತಮ್ಮ ಬದುಕಿನ ಅಂಗವನ್ನಾಗಿಸಿಕೊಂಡು ಪ್ರತಿಯೊಬ್ಬರಿಗೂ ತಮ್ಮ ಕಲೆಯ ಮೂಲಕ ಮನಸ್ಸಿಗೆ ಆನಂದವನ್ನು ನೀಡುತ್ತಾ ಬರುತ್ತಾರೆ. ಆದರೆ ಅವರ ಜೀವನ ಹೇಗಿದೆ? ಹೇಗಿರಬೇಕಾಗಿತ್ತು ಎನ್ನುವುದರ ಬಗ್ಗೆ ಯಾರೂ ಚಿಂತೆ ಮಾಡುವುದಿಲ್ಲ. ಇಲಾಖೆ ಸಹಾಯ ನೀಡುತ್ತದೆ. ನೀಡುವ ಸಹಾಯ ಯಾವುದಕ್ಕೂ ಸಾಲುವುದಿಲ್ಲ ಎನ್ನುವುದನ್ನು ನಾವೇಲ್ಲರೂ ಅರ್ಥ ಮಾಡಿಕೊಂಡು ಅವರಿಗೆ ಪ್ರೋತ್ಸಾಹದ ಜೊತೆಗೆ ಸಹಾಯ ಸಹಕಾರ ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ಪ್ರಕಾಶ ಪೂಜಾರ ಅವರು, ಇತಿಹಾಸದಲ್ಲಿ ನಮ್ಮ ಸಂಸ್ಕೃತಿಯ ಕಲೆಗೆ ಮತ್ತು ಅದನ್ನು ಅಳವಡಿಸಿಕೊಂಡಿರುವ ಕಲಾವಿದರಿಗೆ ರಾಜ ಮಹಾರಾಜರ ಆಶ್ರಯಗಳು ಇದ್ದವು. ಆದರೆ ಅಂದಿನ ರಾಜಮಹಾರಾಜರು ಮತ್ತು ರಾಜಾಢಳಿತ ಇಂದಿಲ್ಲ. ಅದಕ್ಕಾಗಿ ಕಲೆ ಮತ್ತು ಕಲಾವಿದರ ಪೋಷಣೆಗೆ ಜನಾಶ್ರಯ ಬೇಕಾಗಿದೆ. ಆ ನಿಟ್ಟಿನಲ್ಲಿ ನಾವೇಲ್ಲರೂ ಕಲಾವಿದರಿಗೆ ಪ್ರೋತ್ಸಾಹ ನೀಡಿ ಸಹಕರಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಚಲವಾದಿ ಮಹಾಸಭಾದ ಮುಖಂಡ ಕುಬೇರ್ಪ ಅಟವಾಳಗಿ ಆದಿಜಾಂಭವ ಸಂಘದ ಅಧ್ಯಕ್ಷೆ ರೇಣುಕಾ ಬಾಲಣ್ಣನವರ, ಕಾರ್ಯದರ್ಶಿ ಸವೀತಾ ಹುಲ್ಲತ್ತಿ, ಸದಸ್ಯೆ ಗಂಗಮಾಳವ್ವ ಕುಸಗೂರು ಸೇರಿದಂತೆ ಮತ್ತಿತರ ಗಣ್ಯರು ಆ ಭಾಗದ ಮುಖಂಡರು ಪಾಲ್ಗೊಂಡಿದ್ದರು.