ಕುಷ್ಟಗಿ

ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಲು ಕೂಲಿಕಾರರನ್ನು ಹುರಿದುಂಬಿಸಬೇಕು: ತಾಪಂ ಇಓ ಶಿವಪ್ಪ ಸುಬೇದಾರ

ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಲು ಕೂಲಿಕಾರರನ್ನು ಹುರಿದುಂಬಿಸಬೇಕು: ತಾಪಂ ಇಓ ಶಿವಪ್ಪ ಸುಬೇದಾರ

ಕುಷ್ಟಗಿ 05: ಮನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಲು, ಕಾಯಕ ಬಂಧುಗಳು ಕೂಲಿಕಾರರನ್ನು ಹುರಿದುಂಬಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ ಹೇಳಿದರು.  

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮ ಪಂಚಾಯತಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ನಿಡಶೇಸಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ಕಾಮಗಾರಿಯನ್ನು ಪರೀಶೀಲಿಸಿ ಮಾತನಾಡಿದ ಅವರು ಕೆಲಸಕ್ಕೆ ತಕ್ಕಂತೆ ಕೂಲಿಯನ್ನು ಪಾವತಿಸಲಾಗುತ್ತಿದ್ದು ಎಲ್ಲಾ ಕೂಲಿಕಾರರು ಅಳತೆಗೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಿ ರೂ.309/- ಕೂಲಿ ಹಣ ಪಡೆಯುವಂತೆ ಕರೆ ನೀಡಿದರು.  

ಎಲ್ಲಾ ಕೂಲಿಕಾರರು ಪ್ರಧಾನಮಂತ್ರಿ ಜೀವನ ಜ್ಯೋತಿ ಸುರಕ್ಷಾ ಬೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ   

ಬಿಮಾ ಯೋಜನೆ ವಿಮೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯತಿಯಿಂದ ಆಯುಷ್ಮಾನ ಕಾರ್ಡಗಳನ್ನು ವಿತರಿಸಲಾಗುತ್ತಿದ್ದು ಎಲ್ಲರೂ ಪಡೆಯಬೇಕು ಎಂದು ಹೇಳಿದರು.  

ಈ ದಿನದ ಎನ್‌.ಎಂ.ಆರ್ ಪ್ರಕಾರ ಕೂಲಿಕಾರರ ಹಾಜರಾತಿಯನ್ನು ಪರೀಶೀಲಿಸಿದರು.  

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು(ಗ್ರಾಉ) ವಿಶ್ವನಾಥ ರಾಠೋಡ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ದಿ ಅಧಿಕಾರಿ ಬಸವರಾಜ ಯರಗೇರಿ, ಃಈಖಿ ದೊಡ್ಡಬಸಯ್ಯ, ಗ್ರಾಮ ಕಾಯಕ ಮಿತ್ರ ಸುಮಾ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು. 


ಸುದ್ದಿ ಓದಿ