ಕಾರವಾರ

ಕುಮಟಾ: ವಿದ್ಯುತ್ ವ್ಯತ್ಯಯ

ಕುಮಟಾ: ವಿದ್ಯುತ್ ವ್ಯತ್ಯಯ

ಲೋಕದರ್ಶನ ವರದಿ 

ಕಾರವಾರ, ಮೇ.25: ಹೆಸ್ಕಾಂ, ಕುಮಟಾ ಉಪವಿಭಾಗದ 110ಕೆ.ವಿ ಕುಮಟಾ ಉಪ ಕೇಂದ್ರದಲ್ಲಿ 11 ಕೆ.ವಿ ಮಿರ್ಜಾನ್ ಮತ್ತು 11ಕೆ.ವಿ ಕತಗಾಲ ಫಿಡರಿನ ಬ್ರೇಕರಗಳ ತುರ್ತುನಿರ್ವಹಣಾ ಕಾಮಗಾರಿಯು ಮೇ. 27 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಇರುವುದರಿಂದ 110ಕೆ.ವಿ ಉಪಕೇಂದ್ರದಿಂದ ವಿದ್ಯುತ್ ಸ್ಥಗಿತವಾಗಲಿದೆ ಹಾಗೂ ಮಿರ್ಜಾನ್ 11ಕೆ.ವಿ ಹೊಸಮಾರ್ಗದ ರಚನೆ ಕಾಮಗಾರಿ ಇರುವುದರಿಂದ ಕುಮಟಾ ಉಪವಿಭಾಗದ 11ಕೆ.ವಿ ಮಿರ್ಜಾನ , 11ಕೆ.ವಿ ಕತಗಾಲ ಫೀಡರಿನ ಎಲ್ಲಾ ಭಾಗಗಳಲ್ಲಿ, 11ಕೆ.ವಿ ಮಾಸುರ ಹಾಗೂ 11ಕೆ.ವಿ ಬಾಡಾ ಫಿಡರಿನ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಾಗೂ 33ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಇರುವುದರಿಂದ  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಗೋಕರ್ಣ ಶಾಖೆಯ ವ್ಯಾಪ್ತಿಯ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ