ಶ್ರೀಕಾಂತ ದುಂಡಿಗೌಡ್ರರವರಿಗೆ ಸನ್ಮಾನ
ಶಿಗ್ಗಾವಿ 02: ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ಗುತ್ತಿಗೆದಾರ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರ 42ನೇ ಹುಟ್ಟು ಹಬ್ಬದ ನಿಮಿತ್ಯ ತಾಲೂಕಿನ ದಲಿತ ಸಮಾಜದ ಮುಖಂಡರುಗಳು ಸನ್ಮಾನಿಸಿ ಗೌರವಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ತಾಲೂಕಿನ ದಲಿತ ಮುಖಂಡ ಕರಿಯಪ್ಪ ಕಟ್ಟಿಮನಿ, ಮಾಜಿ ಜಿ.ಪಂ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ, ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಹನುಮಂತಪ್ಪ ಫ ಮಾದರ, ಬಿಜೆಪಿ ಎಸ್‌ಸಿ ಮೋರ್ಚಾ ಕೋಶ್ಯಾಧ್ಯಕ್ಷ ಸಂತೋಷ ಕಟ್ಟಿಮನಿ, ಕುರುಬ ಸಮಾಜದ ಮುಖಂಡ ಶಿವಪ್ಪ ಗೊರವರ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.