ಸ್ಕೂಡ್‌ವೈಸ್ ಸಂಸ್ಥೆಯ ಸಾಮಾಜಿಕ ಕಾಳಜಿಗೆ ಅಭಿನಂದನೆ : ಸಭಾಪತಿ ರುದ್ರಪ್ಪ ಲಮಾಣಿ
ಶಿಗ್ಗಾವಿ,12 :-ದೈಹಿಕ ವಯಕ್ತಿಕ ಆರೋಗ್ಯ ಸಂಬಂದಿ ಕಾಯಿಲೆಗಳ ಪರೀಶೀಲನೆಯಂತಹ ಆರೋಗ್ಯ ತಪಾಷಣೆ ಶಿಬಿರ ಆಯೋಜನೆ ಮಾಡಿದ್ದು ಸ್ಕೂಡ್‌ವೈಸ್ ಸಂಸ್ಥೆಯ ಸಾಮಾಜಿಕ ಕಾಳಜಿಗೆ ಅಭಿನಂದನೆಗಳು ಎಂದು ಉಪಸಭಾಪತಿ ರುದ್ರ್ಪ ಲಮಾಣಿ ಹೇಳಿದರು.
ಪಟ್ಟಣದ ದಿ, ಹನುಮಂತಗೌಡ್ರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಶಿರಶಿ ಸ್ಕೂಡ್‌ವೇಸ್ ಸಂಸ್ಥೆ. ಗುಜರಾತ ದೇಸಾಯಿ ಪೌಂಡೇಶನ್ ಟ್ರಸ್ಟ್ ಹಾಗೂ ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯೂರ್ವೇದ ವೈಧ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಸ್ತ್ರೀ ರೋಗ ತಪಾಷಣಾ ಶಿಭಿರದಲ್ಲಿ ಮಾತನಾಡಿದ ಅವರು ಗರ್ಭಿಣಿಯರ ಸಮಸ್ಯಗಳು, ಋತುಚಕ್ರ ಬಾಧೆಗಳು ಗರ್ಭಕೋಶ ಕ್ಯಾನ್ಸಕಾರಕ ಸಮಸ್ಯಗಳು. ಸ್ಥನಕ್ಯಾನ್ಸರ ರೋಗಗಳ ಗೌಪ್ಯ ಸಮಸ್ಯಗಳಿದ್ದಾಗ ಮುಜುಗರಕ್ಕೆ ಒಳಗಾಗಿ ಚಿಕಿತ್ಸೆಗೆ ಮುಂದಾಗುವುದಿಲ್ಲ. ವೈದ್ಯರ ಎದುರಿಗೆ ರೋಗ ಸಮಸ್ಯಗಳ ಬಗ್ಗೆ ಹೇಳಿಕೊಳ್ಳಲಾಗದೇ ಮಾನಶಿಕ ವ್ಯಸನರಾಗುತ್ತಾರೆ. ಅಂತಹ ಸಮಸ್ಯಯೊಂದು ನಮ್ಮದೇ ಕುಟುಂಭದ ನಮ್ಮ ತಾಯಿಯ ಸಾವಿಗೆ ಕಾರಣವಾಗಿತ್ತು ಎಂದು ನೆನಪಿಸಿಕೊಂಡರು. ನಮ್ಮದೇ ಸರ್ಕಾರದಲ್ಲಿ ಶಾಲಾ ಮಕ್ಕಳ ಮಾಶಿಕ ಋತುಬಂಧಕ್ಕೆ ನ್ಯಾಫ್ಕಿನ ಪ್ಯಾಡ್ ಬಳಕೆಯ ಬಗ್ಗೆ ವಿದ್ಯಾವಂತ ಯುವತಿಯರು ಮೂಲಕ ಪ್ರೌಢಶಾಲಾ ಮಕ್ಕಳಿಗೆ ಅರಿವು ನೆರವು ಕಾರ್ಯಕ್ರಮ ನಡೆಸುವಂತೆ ಕೇಳಿಕೊಳ್ಳಲಾಗಿತ್ತು. ಅದು ಯಶಸ್ವಿಯಾಗಲಿಲ್ಲ. ಸ್ತ್ರೀಯರ ಹೆರಿಗೆ ಸಂಬಂಧಿತ ವ್ಯಾದಿಗಳ ಚಿಕಿತ್ಸೆ ಹಾಗೂ ಅರಿವು ಸಂಬಂಧಿತ ಆರೋಗ್ಯ ಶಿಭಿರಗಳ ಬಗ್ಗೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲಿ ಅಲ್ಲದೇ ಸ್ವಸಹಾಯ ಗುಂಪುಗಳ ಮೂಲಕ ಅರಿವು ಮೂಡಿಸುವ, ಮತ್ತು ಸದೂಪಯೋಗಪಡಿಸಿಕೊಳ್ಳಲು ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು.
ಸ್ಕೂಡ್‌ವೈಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ, ವೆಂಕಟೇಶ ನಾಯಕ ಮಾತನಾಡಿ ಕಳೆದ ಹತ್ತುವರ್ಷಗಳಿಂದ ಸಂಸ್ಥೆಯಡಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಕೆಳಸ್ಥರದ ವರ್ಗವನ್ನು ಸಾಮಾಜಿಕ ಅರ್ಥಿಕ ಶಕ್ತಿಯನ್ನಾಗಿ ಮಾಡಲಾಗುತ್ತಿದೆ. ಅನೇಕ ಸ್ತ್ರೀ ಶಕ್ತಿಗುಂಪುಗಳ ಮೂಲಕ ಐಚ್ಛಿಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗವಂತರನ್ನಾಗಿ ಮಾಡಲಾಗುತ್ತಿದೆ. ಅಲ್ಲದೇ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ.ಎಂದರು.
ಕಾರ್ಯಕ್ರಮದಲ್ಲಿ ಬೂಟೀಷನ್ ತರಬೇತಿ ಪಡೆದ ಮಹಿಳಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾಂಗ್ರೇಸ್ ಮುಖಂಡರಾದ ಯಾಶೀರಖಾನ ಪಠಾಣ. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ. ಸುಭಾಸ್ ಚೌಹಾಣ. ರಮೇಶ ವನಹಳ್ಳಿ. ಮಂಜುನಾಥ ಬ್ಯಾಹಟ್ಟಿ. ವೈದ್ಯಕೀಯ ಮಹಾವಿದ್ಯಾಲಯದ ತಜ್ಞೆ ವೈಧ್ಯರು. ಶ್ರೂಷೃಕಿಯರು. ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಮತ್ತು ಪದಾಧಿಕಾರಿಗಳು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿದ್ದರು.