ಚಿಮ್ಮಲಗಿ ಏತನಿರಾವರಿ ಕಾಲುವೆಗಳಿಗೆ ಕೃಷ್ಣಾ ನದಿ ನೀರು: ಶಾಸಕ ನಾಡಗೌಡರಿಗೆ ಅಭಿನಂದನೆ
ಮುದ್ದೇಬಿಹಾಳ 09: ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದವರು ಸಧ್ಯ ಚಿಮ್ಮಲಗಿ ಏತನೀರಾವರಿ ಪೂರ್ವ ಕಾಲುವೆಗಳಿಗೆ ಕೃಷ್ಣಾ ನದಿ ನೀರು ಹರಿಸಿದ್ದರಿಂದ ಕುಂಟೋಜಿ ಗ್ರಾಮದ ರೈತರು ಹರ್ಷೋದ್ಘಾರ ವ್ಯಕ್ತಪಡಿಸಿದರಲ್ಲದೇ ನೀರು ಹರಿಸಲು ಪ್ರಮುಖ ಕಾರಣರಾದ ಶಾಸಕ ಸಿ ಎಸ್ ನಾಡಗೌಡರಿಗೆ ಗುರುವಾರ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಕುಂಟೋಜಿ ಗ್ರಾಮದ ನಿವೃತ್ತ ಸೈನಿಕ ಹಾಗೂ ರೈತ ನಾಗಲಿಂಗಯ್ಯ ಮಠ ಅವರು ಮಾತನಾಡಿ, ಪ್ರಸ್ತುತ ಈ ಬಾರಿ ಸಕಾಲಕ್ಕೆ ಮುಂಗಾರು ಹಿಂಗಾರು ಉತ್ತಮ ಮಳೆಯಾಗದೇ ಇರುವುದರಿಂದ ಸಂಪೂರ್ಣ ಬರಗಾರ ಎದುರಾಗಿ ಬಿತ್ತನೆ ಮಾಡಲು ಮಾತ್ರವಲ್ಲದೇ ದನ ಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿ ರೈತರ ಬಾಳು ಹೇಳತೀರದಂತಾಗಿ ಮುಂದೆನಪ್ಪ ನಮ್ಮ ಗತಿ ಎಂದು ಹಣೆಗೆ ಕೈಇಟ್ಟುಕೊಳ್ಳುವಂತಾಗಿತ್ತು.
ಈ ನಿಟ್ಟಿನಲ್ಲಿ ತಾಲೂಕಿನ ಬಸರಕೋಡ, ಕುಂಟೋಜಿ, ನಾಲತವಾಡ, ಹೋಕ್ರಾಣಿ, ಬಿದರಕುಂದಿ ಗೋನಾಳ ಸೇರಿದಂತೆ ಇನ್ನು ಅನೇಕ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಪಕ್ಷಾತೀತವಾಗಿ ಕಳೇದ ಅ,29 ರಂದು ಶಾಸಕ ಸಿ ಎಸ್ ನಾಡಗೌಡರವನ್ನು ಬೇಟಿ ಮಾಡಿ ಬಗರಾಲದ ಹಾಗೂ ರೈತರ ಸಂಕಷ್ಟದ ಕುರಿತು ಮನವರಿಕೆ ಮಾಡಿಕೊಟ್ಟು ಹೇಗಾದರೂ ಮಾಡಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಚಿಮ್ಮಲಗಿ ಏತ ನಿರಾವರಿಗೆ ಪೂರ್ವ ಕಾಲುವೆಗಳಿಗೆ ನೀರು ಹರಿಸುವಂತೆ ಮಾಡಿದರೇ ರೈತರಿಗೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ ಇದರಿಂದ ರೈತರನ್ನು ಸಂಕಷ್ಟದಿಂದ ಪಾರು ಮಾಡಬಹುದಾಗಿದೆ ಎಂದು ಮನವಿ ಮಾಡಿಕೊಳ್ಳಲಾಗಿತ್ತು.
ಅದರಂತೆ ಶಾಸಕ ಸಿ ಎಸ್ ನಾಡಗೌಡವರು ಸಂಬಂಧಪಟ್ಟ ಆಲಮಟ್ಟಿ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಹೇಗಾದರೂ ಮಾಡಿ ನಮ್ಮ ಭಾಗದ ರೈತರಿಗೆ ಅನುಕೂಲವಾಗುವಂತೆ ಅಲ್ಪಸ್ವಲ್ಪನಾದರೂ ನೀರು ಹರಿಸಲೇಬೇಕು ಎಂದು ಒತ್ತಾಯಿಸಿ ಒಂದು ವಾರದೊಳಗಾಗಿ ಚಿಮ್ಮಲಗಿ ಏತನಿರಾವರಿ ಕಾಲುವೆಗಳ ಮೂಲಕಿ ನೀರು ಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆೆ ನೀಡಿದ್ದರು.
ಸಧ್ಯ ಕಳೇದ ಎರಡು ಮೂರು ದಿನಗಳಿಂದ ಜಟ್ಟಗಿ, ಬಿದರಕುಂದಿ, ಗೋನಾಳ, ಹಡಲಗೇರಿ, ಶಿರೋಳ, ಕವಡಿಮಟ್ಟಿ, ಜಲಪೂರ, ಕುಂಟೋಜಿ, ಅಬ್ಬಿಹಾಳ ಹೊಕ್ರಾಣಿ, ಜಮ್ಮಲದಿನ್ನಿ ಸೇರಿದಂತೆ ಇನ್ನು ಅನೇಕ ಗ್ರಾಮಗಳ ಮಾರ್ಗವಾಗಿ ಚಿಮ್ಮಲಗಿ ಏತನೀರಾವರಿ ಪೂರ್ವ ಕಾಲುವೆಯ 135 ಕಿ. ಮೀದವರಗೆ ನಿರ್ಮಿಸಲಾದ ಕಾಲುವೆಗೆ ಕೃಷ್ಣಾ ನದಿ ನೀರು ಹರಿಸುತ್ತಿರುವುದಕ್ಕೆ ನುಡಿದಂತೆ ನಡೆದ ಶಾಸಕ ಸಿ ಎಸ್ ನಾಡಗೌಡ ಅವರಿಗೆ ಪಕ್ಷಾತೀತವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ವೇಳೆ ಕುಂಟೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗಧೀಶ ವಾಲಪ್ಪ ಲಮಾಣಿ ಅವರು ಮಾತನಾಡಿ ಈ ಬರಗಾಲದಿಂದ ತತ್ತರಿಸಿ ಹೋಗಿದ್ದ ಈ ಭಾಗದ ರೈತಾಪಿ ಜನರಿಗೆ ಕಾಲುವೆಗಳ ಮೂಲಕ ನೀರು ಹರಿಸುವಲ್ಲಿ ಪ್ರಾಮಾಣಿಕತೆ ಮೆರೆದ ಸಿ ಎಸ್ ನಾಡಗೌಡ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.
ಈ ವೇಳೆ ಕಾಂಗ್ರೇಸ್ ಮುಖಂಡ ಮೈಬೂಬ ದಖಣಿ, ರೈತರಾದ ಬಸಯ್ಯಾ ಹಿರೇಮಠ, ಮಡಿವಾಳಪ್ಪ ಎಮ್ಮೇಟ್ಟಿ, ಯಲ್ಲಪ್ಪ ಗಸ್ತೆಗಾರ, ಮಲ್ಲಿಕಾರ್ಜುನ ಹಂಡಗಿ ಸೇರಿದಂತೆ ಹಲವರು ಇದ್ದರು.