ನಟರಾಜ ನಾಟ್ಯ ಕಲಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಠಮಿ
ಶಿಗ್ಗಾವಿ 11: ಪಟ್ಟಣದ ಜಯನಗರದಲ್ಲಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಟರಾಜ ನಾಟ್ಯ ಕಲಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಮಕ್ಕಳಿಗೆ ಕೃಷ್ಣ ಮತ್ತು ರಾಧೆ ಮತ್ತು ಯಶೋಧಾ ಮಯ್ಯಾ ರೂಪಕ ಸ್ಪರ್ಧೆಯು ನೃತ್ಯ ಗುರು ಸಾಯಿಬಾಬಾ ಕಾಮನಹಳ್ಳಿ ನೇತೃತ್ವದಲ್ಲಿ ಗಮನ ಸೆಳೆಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಕಾರ್ಯಕ್ರಮ ಮುಖ್ಯ ಅತಿಥಿ ಹಾಗೂ ಉದ್ಯಮಿ ಉಮೇಶ್ ಗೌಳಿ ಜ್ಯೋತಿ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನೃತ್ಯ ಶಾಲೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೃತ್ಯ ಶಾಲೆಯು ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಾದ ಕುಮಾರಿ ಐಶ್ವರ್ಯ ಸುಣಗಾರ, ಗೌತಮಿ ವೇರ್ಣೇಕರ್, ಸನ್ಮತಿ ಇಳಗೆರ, ಸ್ಮೀತಾ ಸುಣಗಾರ ಇವರುಗಳಿಗೆ ರಾಜಶೇಖರ ಹಿರೇಮಠ ಪ್ರಶಸ್ತಿ ಪತ್ರ ನೀಡಿದರು
ಕುಮಾರಿ ಜಾಹ್ನವಿ ಸ್ವಾಗತಿಸಿದರು, ಶಾಲಿನಿ ಕಾಮನಹಳ್ಳಿ ಪ್ರಾರ್ಥಿಸಿದರು, ನೃತ್ಯ ಶಾಲೆಯ ಗುರು ಸಾಯಿಬಾಬಾ ಕಾಮನಹಳ್ಳಿ ವಂದಿಸಿದರು. ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.