ಇಂಟರ್ನ್ಯಾಷನಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿಯ ವೇಷಭೂಷಣ ಸ್ಪರ್ಧೆ
ಲೋಕದರ್ಶನ ವರದಿ
ಶಿಗ್ಗಾವಿ 13: ಮಕ್ಕಳಲ್ಲಿರುವ ಪ್ರತಿಭೆಯನ್ನು ಹಾಗೂ ಅವರಲ್ಲಿರುವ ಕೌಶಲ್ಯವನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮಾರ್ಗದರ್ಶಿಗಳಾಗುತ್ತವೆ ಎಂದು ಪ್ರಾಚಾರ್ಯ ಶಿವು ಹಾವೇರಿ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳಿಗಾಗಿ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ವೇಷಭೂಷಣ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳಿಗೆ ಅತಿ ಹೆಚ್ಚು ವೇಷಭೂಷಣಗಳಲ್ಲಿ ಕೃಷ್ಣ ಮತ್ತು ರಾಧೆಯ ರೂಪಕಗಳು ಹೆಚ್ಚು ಇಷ್ಟವಾಗುತ್ತವೆ ಆದ್ದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಮಕ್ಕಳು ಸಹಿತ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ವೇಷಭೂಷಣ ಧರಿಸಿ ಬಂದಿದ್ದು ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಬೆಳೆಯಲು ಕಾರಣವಾಗುತ್ತದೆ ಎಂದರು.
ಶಿಕ್ಷಕಿ ಪಿ.ಬಿ.ಮಂಜು ಮಾತನಾಡಿ ನಮಗೆ ಇಂತಹ ಕಾರ್ಯಕ್ರಮ ಮಾಡಲು ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು, ಪಾಲಕರು ಸದಾ ನಮಗೆ ಬೆಂಬಲವಾಗಿ ನಿಂತಿರುವ ಕಾರಣ ನಾವು ಇಂತಹ ಕಾರ್ಯಕ್ರಮ ಮಾಡಲು ಅನುಕೂಲವಾಗಿದೆ. ಅಲ್ಲದೇ ಮಕ್ಕಳ ಪ್ರತಿಭೆ ಗುರುತಿಸಲು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಕಿಯರಾದ ರಂಜಿತಾ, ಉಮಾ, ಶ್ವೇತಾ, ಶೋಭಾ ಮಕ್ಕಳ ವೇಷಭೂಷಣ ಧರಿಸಲು ನೇರವಾದರು. ಉಳಿದ ಶಿಕ್ಷಕರು, ಸಿಬ್ಬಂದಿಗಳು, ಪಾಲಕರು, ಮಕ್ಕಳು ಉಪಸ್ಥಿತರಿದ್ದರು.