ರಾಷ್ಟ್ರೀಯ

ಗುಲಾಮ್‌ ನಬಿ ಆಜಾದ್‌ಗೆ ಕೋವಿಡ್‌ ಸೋಂಕು ದೃಢ; ಹೋಂ ಕ್ವಾರಂಟೈನ್‌

ಗುಲಾಮ್‌ ನಬಿ ಆಜಾದ್‌ಗೆ ಕೋವಿಡ್‌ ಸೋಂಕು ದೃಢ; ಹೋಂ ಕ್ವಾರಂಟೈನ್‌

ನವದೆಹಲಿ, ಅ 16 : ಹಿರಿಯ ಕಾಂಗ್ರೆಸ್‌ ನಾಯಕ ಗುಲಾಮ್‌ ನಬಿ ಆಜಾದ್‌ ಅವರಿಗೆ ಶುಕ್ರವಾರ ಕೋವಿಡ್‌ ಸೋಂಕು ದೃಢಪಟ್ಟಿದೆ. ರಾಜ್ಯಸಭೆಯ ವಿಪಕ್ಷ ನಾಯಕರೂ ಆಗಿರುವ ಆಜಾದ್‌, ಹೋಂ ಐಸೊಲೇಷನ್‌ನಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ತಮ್ಮನ್ನು ಸಂಪರ್ಕಿಸಿದವರು ಕೋವಿಡ್‌ ಪರೀಕ್ಷೆಗೊಳಪಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, "ನನಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ನಾನು ಹೊಂ ಕ್ವಾರಂಟೈನ್‌ನಲ್ಲಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಶಿಷ್ಟಾಚಾರ ಪಾಲಿಸಿ" ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಎಐಸಿಸಿ ನಾಯಕ ಅಹಮದ್‌ ಪಟೇಲ್‌, ಹಿರಿಯ ಮುಖಂಡ ಮೋತಿಲಾಲ್‌ ವೋರಾ ಮತ್ತು  ಎಐಸಿಸಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ಸೋಂಕು ದೃಢಪಟ್ಟಿತ್ತು. 


ಸುದ್ದಿ ಓದಿ