ಕೋವಿಡ್ ಮೂರನೆ ಅಲೆ: ಸಿಎಂ ವಿಶೇಷ ಅಧಿವೇಶನ ಕರೆದು ಚಚರ್ೆ ನಡೆಸಲಿ: ಕವಟಗಿಮಠ
ಚಿಕ್ಕೋಡಿ 12: ಕೋವಿಡ್ ಮೂರನೆ ಅಲೆ ಅಪ್ಪಳಿಸದ ಹಾಗೇ ಮುಂಜಾಗ್ರತಾ ಕ್ರಮಕ್ಕಾಗಿ ಮತ್ತು ಆರೋಗ್ಯ ಇಲಾಖೆಯಲ್ಲಿ ಆಗಬೇಕಾದ ಬದಲಾವಣೆ ಕುರಿತು ಸಮಗ್ರ ಚಚರ್ೆ ನಡೆಸಲು ಸಿಎಂ ತಕ್ಷಣಾ ವಿಶೇಷ ಅಧೀವೇಶನ ಕರೆಯಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.ಚಿಕ್ಕೋಡಿ ತಾಲೂಕಿನ ಜೈನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ದೇಶ ಹಾಗೂ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜ್ಯದಲ್ಲಿ ವೈದ್ಯರ ಕೊರತೆ. ನರ್ಸಗಳು ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ಚಚರ್ೆ ನಡೆಸಲು ವಿಶೇಷ ಅಧೀವೇಶನ ಕರೆಯಬೇಕು ಎಂದರು.ಸಿಎಂ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಅವರು ತಕ್ಷಣಾ ಗ್ರಾಮ ಪಂಚಾಯತಿ ಸದಸ್ಯರಿಗೆ ಲಸಿಕೆ ನೀಡಲು ಆದೇಶ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಸದಸ್ಯರು ಲಸಿಕೆ ಪಡೆದು ಕೊರೊನಾ ಮುಕ್ತ ಗ್ರಾಮವನ್ನಾಗಿ ರೂಪಿಸಬೇಕು ಎಂದರು.
ರಾಜ್ಯದ ಉಳಿದ ಜಿಲ್ಲೆಯಲ್ಲಿ ಲಾಕಡೌನ ಮುಗಿದಿದೆ. ನಮ್ಮ ಜಿಲ್ಲೆಯಲ್ಲಿ ಲಾಕಡೌನ ಮುಂದುವರೆದಿದೆ. ಆದರೂ ಜಿಲ್ಲೆಯಲ್ಲಿ ಕೋವಿಡ್ ಕಡಿಮೆವಾಗಿದೆ ಎಂಬುದನ್ನು ನಿರ್ಲಕ್ಷ ಮಾಡಬಾರದು. ಹಳ್ಳಿಯ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಮುಂದಿನ ಒಂದು ವಾರ ಲಾಕಡೌನ ಕಠಿಣ ಮಾಡಬೇಕಿದೆ. ಮಹಾರಾಷ್ಟ್ರದ ಜನರು ಬಂದು ಹೋಗೋದನ್ನು ಪೊಲೀಸ್ ಇಲಾಖೆ ಗಮನಿಸಬೇಕು. ಗ್ರಾಮೀಣ ಪ್ರದೇಶದ ಜನರು ಎಚ್ಚರಿಕೆ ಇರಬೇಕು. ಕೊರೊನಾ ಬಗ್ಗೆ ನಿಸ್ಕಾಳಜಿ ತೋರದೇ ಜಾಗೃತರಾಗಬೇಕು. ಮದುವೆ. ಧಾಮರ್ಿಕ ಕಾರ್ಯಕ್ರಮ ಅವಕಾಶ ಮಾಡಿಕೊಡಬಾರದು ಎಂದರು.
ಆರೋಗ್ಯ ಇಲಾಖೆ ವೈದ್ಯರು ಮತ್ತು ದಾದಿಯರು ಜೀವದ ಹಂಗು ತೊರೆದು ಸಮಾಜ ರಕ್ಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.ಅಧ್ಯಕ್ಷತೆಯನ್ನು ಶಾಸಕ ದುಯರ್ೋಧನ ಐಹೊಳೆ ವಹಿಸಿದ್ದರು.ಜೈನಾಪೂರ ಗ್ರಾಪಂ ಅಧ್ಯಕ್ಷ ಎಸ್.ಎಸ್.ಘರಬುಡೆ, ಕರೋಶಿ ಗ್ರಾಪಂ ಅಧ್ಯಕ್ಷ ಸಾವಿತ್ರಿ ಜೆಧೆ, ದುರೀಣ ಮಹೇಶ ಭಾತೆ, ಎಡಿಎಚ್ಒ ಡಾ.ಎಸ್.ಎಸ್ಗಡೇದ, ಟಿಎಚ್ಒ ಡಾ.ವಿಠ್ಢಲ ಶಿಂಧೆ, ತಹಶಿಲ್ದಾರ ಪ್ರವೀಣ ಜೈನ, ಜಿಪಂ ಮಾಜಿ ಸದಸ್ಯೆ ಲಕ್ಷ್ಮೀ ಕುರುಬರ, ವಿಜಯ ಕೊಠಿವಾಲೆ, ಬಸು ಮಾಳಗೆ ಮುಂತಾದವರು ಇದ್ದರು