ಕೋವಿಡ್ 19 : ದೇಶದ ಸೋಂಕು ಪ್ರಕರಣ 73,07,098 ಕ್ಕೆ ಏರಿಕೆ; ಚೇತರಿಕೆ ದರ ಶೇ 87.36
ನವದೆಹಲಿ, ಅ 15 :ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ 67,708 ಪ್ರಕರಣ ದಾಖಲಾಗಿದ್ದು, ಒಟ್ಟು ಸಂಖ್ಯೆ 73 ಲಕ್ಷಗಳನ್ನು ದಾಟಿದೆ. 81,514 ರೋಗಿಗಳು ಗುಣಮುಖರಾಗಿದ್ದು, ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾದವರ ಸಂಖ್ಯೆ 63,83,441 ಕ್ಕೆ ತಲುಪಿದೆ. ಕಳೆದ ಒಂದು ದಿನದಲ್ಲಿ 680 ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ 1,11,266 ಕ್ಕೆ ಏರಿದೆ.
ಶೇಕಡಾವಾರು ಪ್ರಕಾರ, ಸಕ್ರಿಯ ಪ್ರಕರಣಗಳು ಶೇ 11.12. ಚೇತರಿಕೆ ಪ್ರಮಾಣ ಶೇ 87.36, ಸಾವಿನ ಪ್ರಮಾಣ ಶೇ 1.52 ರಷ್ಟಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 11,36,183 ಮಾದರಿಗಳನ್ನು ಪರೀಕ್ಷಿಸಲಾಯಿತು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಬುಧವಾರದವರೆಗೆ 9,12,26,305 ಮಾದರಿಗಳನ್ನು ಸೋಂಕು ಪತ್ತೆಗಾಗಿ ಪರೀಕ್ಷಿಸಲಾಗಿದೆ.ಏತನ್ಮಧ್ಯೆ, ಮಹಾರಾಷ್ಟ್ರವು ಗರಿಷ್ಠ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.